Select Page

ಮೇ.24 ರಂದು ಕಾಮಾಕ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯ ಉದ್ಘಾಟನೆ

ಮೇ.24 ರಂದು ಕಾಮಾಕ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯ ಉದ್ಘಾಟನೆ



ಬೆಳಗಾವಿ : ಬೆಳಗಾವಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಾಮಾಕ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯ ಇದೇ ಮೇ 24 ರಂದು ಉದ್ಘಾಟನೆಗೊಳ್ಳಲಿದೆ ಎಂದು ಕಾಮಾಕ್ಯಾ ಡೈಗ್ನೋಸ್ಟಿಕ್ ಸೆಂಟರ್ ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಎಂ, ಕವೀಶ್ವರ ತಿಳಿಸಿದರು.

ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಎನ್ಎಬಿಎಲ್ ನಿಂದ ಮಾನ್ಯತೆ ಪಡೆದಿರುವ ಲ್ಯಾಬ್ ಇದಾಗಿದ್ದು ಲ್ಯಾಬ್ ನಲ್ಲಿ ಟೆಸ್ಟ್ ಮಾಡಲಾಗುವ ರೋಗ ನಿರ್ಧಾರಕಗಳು ಅತ್ಯಂತ ನಿಖರವಾಗಿರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ಮೇ 24 ರಂದು ಬೆಳಗಾವಿಯ ಸದಾಶಿವನ ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಮೇಲ್ಭಾದದಲ್ಲಿ ಹೊಸದಾಗಿ ಲ್ಯಾಬ್ ಉದ್ಘಾಟನೆಗೊಳ್ಳಲಿದೆ ಎಂದರು.

ಇನ್ನು ಕಾಮಾಖ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಅನೀಲ್ ಪಾಟೀಲ್ ಮಾತನಾಡಿ ಆಪ್ ಮೂಲಕ ಕಾರ್ಯನಿರ್ವಹಿಸುವ ಬೆಳಗಾವಿಯ ಮೊದಲ ಲ್ಯಾಬ್ ಕಾಮಾಖ್ಯಾ ಲ್ಯಾಬ್ ಆಗಿದ್ದು ಗ್ರಾಹಕರ ಆರೋಗ್ಯದ ಕುರಿತಾದ ನಿಖರ ಫಲಿತಾಂಶ ನೀಡುವುದು ಕಾಮಾಖ್ಯಾ ಲ್ಯಾಬ್ ನ ಪ್ರಮುಖ ಗುರಿಯಾಗಿದೆ ಎಂದರು.

ಬೆಳಗಾವಿಗರಿಗಾಗಿ ಕಾಮಾಖ್ಯಾ ಹೆಲ್ತ ಪ್ಲಸ್ ಕಾರ್ಡ್!

ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ನಿರ್ದೇಶಕ ಅನೀಲ್ ಪಾಟೀಲ್ ಇದೆ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯ ಜನರಿಗಾಗಿ ಕಾಮಾಖ್ಯಾ ಹೆಲ್ತ್ ಪ್ಲಸ್ ಕಾರ್ಡ್ ಪರಿಚಯಿಸುತ್ತಿದ್ದು ಜೀವಮಾನ ಅವಧಿಗೆ ಕುಟುಂಬದ ಓರ್ವ ವ್ಯಕ್ತಿ 2499₹ ರೂ ನೀಡಿ ಕಾಮಾಕ್ಯಾ ಹೆಲ್ತ ಪ್ಲಸ್ ಕಾರ್ಡ್ ಪಡೆದುಕೊಂಡರೆ ಜೀವಮಾನವೀಡಿ ಆತನಿಗೆ 30 ಪರ್ಸಂಟ್ ಡಿಸ್ಕೌಂಟ್ ಮತ್ತು ಆತ ಸೂಚಿಸುವ ಇಬ್ಬರು( ನಾಮಿನೇಟೆಡ್) ಕುಟುಂಬ ಸದಸ್ಯರಿಗೆ 20 ಪರ್ಸಂಟ್ ಡಿಸ್ಕೌಂಟ್ ನೀಡಲಾಗುವುದು ಎಂದರು. ಇನ್ನು ಹೆಲ್ತ್ ಪ್ಲಸ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯ ಸೇರಿ ಕುಟುಂಬದ ಇಬ್ಬರು ನಾಮಿನೇಟೆಡ್ ಸದಸ್ಯರಿಗೆ ಜೀವಮಾನವಿಡಿ ಫ್ರೀ ಶುಗರ್ ಟೆಸ್ಟ್ ಮಾಡಿಕೊಡುತ್ತೆವೆ ಎಂದರು.

ಕಾಮಾಖ್ಯಾ ಹೆಲ್ತ್ ಪ್ಲಸ್ ಆಪ್!!

ಇದೇ ಮೊದಲ ಬಾರಿಗೆ ಆಪ್ ಆಧಾರಿತವಾಗಿ ಬೆಳಗಾವಿಯಲ್ಲಿ ಸೇವೆ ಆರಂಭಿಸಿರುವ ಕಾಮಾಖ್ಯಾ ಡೈಗ್ನೋಸ್ಟಿಕ್ ಲ್ಯಾಬ್ ಬೆಳಗಾವಿಗರಿಗಾಗಿ ಹೊಸ ಕಾಮಾಖ್ಯಾ ಹೆಲ್ತ ಪ್ಲಸ್ ಆಪ್ ಸಿದ್ದಪಡಿಸಿದೆ. ಪ್ಲೇ ಸ್ಟೋರ್ ಅಥವಾ ಐಒಎಸ್ ಮೂಲಕ ಆಪ್ ಡೌಲ್ನೋಡ್ ಮಾಡಿಕೊಂಡು ಗ್ರಾಹಕರು ಕಾಮಾಖ್ಯಾ ಡೈಗ್ನೋಸ್ಟಿಲ್ ಹಾಗೂ ಸಂಶೋಧನಾ ಪ್ರಯೋಗಾಲದಯದ ಯೋಜನೆಗಳ ಕುರಿತು ‌ತಿಳಿದುಕೊಳ್ಳಬಹುದು ಎಂದರು. ಈಗಾಗಲೇ ಆಪ್ ಗೆ 400 ರಿಂದ 500 ಜನ ಸದಸ್ಯರಾಗಿದ್ದು, ಆಪ್ ನಲ್ಲಿ ಕಾಮಾಖ್ಯಾ ಡೈಗ್ನೋಸ್ಟಿಕ್ ಸೆಂಟರ್ ನ ಎಲ್ಲ ಹೆಲ್ತ್ ಚಕ್ ಅಪ್ ಹಾಗೂ ರಿಯಾಯಿತಿಗಳ ಕುರಿತು ಮಾಹಿತಿ ಇದೆ ಎಂದರು.

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನುರಿತ ಸಿಬ್ಬಂಧಿ ಹೊಂದಿರುವ ಕಾಮಾಖ್ಯಾ!!

ಇದೇ 24 ರಂದು ಬೆಳಗಾವಿಯಲ್ಲಿ ಉದ್ಘಾಟನೆಗೊಳ್ಳಲಿರುವ ಕಾಮಾಖ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯ ಒಟ್ಟು 20 ಸಿಬ್ಬಂಧಿಗಳನ್ನು ಹೊಂದಿದ್ದು ಅದರಲ್ಲಿ ಮೂವರು ವೈದ್ಯರು ಹಾಗೂ 17 ಜ‌ನ ವಿವಿಧ ಟೆಕ್ನಿಷಿಯನ್ಸ್ ಇದ್ದಾರೆ. ಬೆಳಗಾವಿಯ ಸದಾಶಿವವ ನಗರದಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮೇಲ್ಭಾಗದಲ್ಲಿ ಕಾಮಾಖ್ಯಾ ಡೈಗ್ನೋಸ್ಟಿಕ್ ಸೆಂಟರ್ ಇದ್ದು ತಾವೂ ಸಹ ಭೇಟಿ ನೀಡಬಹುದು.

ಹೆಲ್ತ ಕಾರ್ಡ್ ಹೊಂದಿರುವ ಸದಸ್ಯರಿಗೆ ಬರೊಬ್ಬರಿ 69 ಹೆಲ್ತ್ ಚಕ್ ಅಪ್ ಫ್ರೀ ಫ್ರೀ!

ಕಾಮಾಖ್ಯಾ ಡೈಗ್ನೋಸ್ಟಿಕ್ ಸೆಂಟರ್ ಹೊರತಂದಿರುವ ಕಾಮಾಖ್ಯಾ ಹೆಲ್ತ ಕಾರ್ಡ್ ಹೊಂದಿರುವ ಸದಸ್ಯರಿಗೆ 69 ವಿವಿಧ ಟೆಸ್ಟಗಳನ್ನು ಉಚಿತವಾಗಿ ಮಾಡಲಾಗುವುದು ಎಂದು ಕಾಮಾಖ್ಯಾ ಡೈಗ್ನೋಸ್ಟಿಕ್ ಸೆಂಟರ್ ನಿರ್ದೇಶಕ‌ ಹಾಗೂ ಮಾರ್ಕೇಟಿಂಗ್ ಮುಖ್ಯಸ್ಥ ಅನೀಲ್ ತಿಳಿಸಿದರು. ಕಾರ್ಡ್ ಹೊಂದಿದ ಸದಸ್ಯರು ಕಾರ್ಡ್ ಹೊಂದಿದ ಮೂರು ತಿಂಗಳ ಒಳಗಾಗಿ ಬಂದು 69 ವಿವಿಧ ಪರೀಕ್ಷೆಗಳನ್ನು ಮಾಡಬಹುದು ಎಂದರು. ಅಲ್ಲದೇ ಆಪ್ ನಲ್ಲಿ ಟೆಸ್ಟಿಂಗ್ ಗಾಗಿ ಬುಕ್ ಮಾಡಿದರೆ ಟೆಸ್ಟಿಂಗ್ ಗೆ ಸ್ಯಾಂಪಲ್ಸ್ ಪಡೆಯಲು ಬರುತ್ತಿರುವ ಸಿಬ್ಬಂಧಿಯ ಹೆಸರು ಹಾಗೂ ಅವರ ಡೆಸಿಸ್ನೇಷನ್ ಮತ್ತು ಅವರು ಬಂದು ತಲುಪುವ ಸಮಯವನ್ನೂ ಸಹ ಆಪ್ ನಲ್ಲಿ ಗ್ರಾಹಕರು ನೋಡಬಹುದು ಎಂದರು.

ಗ್ರಾಹಕರ ಅನುಕೂಲಕ್ಕಾಗಿ ಕಾಲ್ ಸೆಂಟರ್!

ಬೆಳಗಾವಿ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಬೆಳಗಾವಿ ಜಿಲ್ಲೆಯ ಜನರಿಗಾಗಿ ಇದೇ ಮೊಲದ ಬಾರಿಗೆ ಡೈಗ್ನೋಸ್ಟಿಕ್ ಸೆಂಟರ್ ಒಂದು ಕಾಲ್ ಸೆಂಟರ್ ಪ್ರಾರಂಭಿಸಿದ್ದು ಗ್ರಾಹಕರು ಕಾಲ್ ಸೆಂಟರಿಗೆ ಕರೆ ಮಾಡಿ ತಮ್ಮ ಟೆಸ್ಟಿಂಗ್ ಬುಕ್ ಮಾಡಬಹುದು ಎಂದು ಅನೀಲ್ ತಿಳಿಸಿದರು. ಅಲ್ಲದೇ ಶೀಘ್ರದಲ್ಲಿಯೇ ಕಾಲ್ ಸೆಂಟರ್ ನಂಬರ್ ತಿಳಿಸಲಾಗುವುದು ಎಂದರು.

ಇದೇ ಮೇ 24ಕ್ಕೆ ಕಾಮಾಖ್ಯಾ ಡೈಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ!!

ಇದೇ ಮೇ 24 ರಂದು ಬೆಳಗಾವಿಯ ಸದಾಶಿವ ನಗರದಲ್ಲಿ ಕಾಮಾಖ್ಯಾ ಡೈಗ್ನೋಸ್ಟಿಕ್ ಸೆಂಟರ್ ಉದ್ಘಾಟನೆಗೊಳ್ಳಲಿದ್ದು ದಿವ್ಯ ಸಾನಿಧ್ಯವನ್ನು ಶ್ರೀ. ಮ.ನಿ.ಪ್ರ ಗುರಿಸಿದ್ಧ ಮಹಾಸ್ವಾಮೀಜಿಗಳು ಕಾರಂಜಿಮಠ ಬೆಳಗಾವಿಯವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಆಸೀಪ್ ರಾಜು ಸೇಠ್ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಶಾಸಕ ಅಭಯ್ ಪಾಟೀಲ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇನ್ನು ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಎಂ ಕವೀಶ್ವರ, ಹಾಗೂ ನಿರ್ದೇಶಕ ಹಾಗೂ ಮಾರ್ಕೇಟಿಂಗ್ ಮುಖ್ಯಸ್ಥ ಅನೀಲ್ ಪಾಟೀಲ್ ಸೇರಿದಂತೆ ಕಾಮಾಖ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯದ ಸಿಬ್ಬಂಧಿಗಳು ಹಾಜರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!