ಸಿದ್ದರಾಮೋತ್ಸವಕ್ಕೆ ದಾವಣಗೆರೆ ವರೆಗೂ ಪಾದಯಾತ್ರೆ ಹೊರಟ ಹೌದೋ ಹುಲಿಯಾ ಅಭಿಮಾನಿ
ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವನ್ನು ಭೇಟಿಯಾಗಲು ಅವರ ಅಭಿಮಾನಿಯೊಬ್ಬ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಪಾದಯಾತ್ರೆ ಮೂಲಕ ತೆರಳಿದ್ದಾನೆ.
ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಸಂತೋಷ ವಿಠೊಬಾ ಚೋರಮುಲೆ ಎಂಬ ಯುವಕ, ದಾವಣಗೆರೆಯಲ್ಲಿ ಜರುಗಲಿರುವ ಸಿದ್ರಾಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸುಮಾರು 365 ಕಿ.ಮೀ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸುತ್ತಿದ್ದಾನೆ.
ಮೋಳೆ ಗ್ರಾಮದಿಂದ ಭಾನುವಾರ ಬೆಳಿಗ್ಗೆ ಪಾದಯಾತ್ರೆ ಪ್ರಾರಂಭ ಮಾಡಿರುವ ಅಭಿಮಾನಿ, ಸುಮಾರು 365 ಕಿ.ಮೀ ದೂರವನ್ನು ಕ್ರಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾನೆ. ಜೊತೆಗೆ ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿ ಆಗಬೇಕಡಂದು ಹರಕೆ ಹೊತ್ತುಕೊಂಡು ದಾರಿಯುದ್ದಕ್ಕೂ ಬರುವ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಕೇಳಿಕೊಳ್ಳುತ್ತಿದ್ದೆನೆ ಎಂದು ತಿಳಿಸಿದರು.
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬೇಕೆಂದು ಈತ ಮೋಳೆ ಗ್ರಾಮದಿಂದ ಶ್ರೀಶೈಲವರೆಗೆ ಪಾದಯಾತ್ರೆ ಮಾಡಿದ್ದ. ಅದಲ್ಲದೆ ಹೋದ ವರ್ಷ ಅವರ ಸಿದ್ದರಾಮಯ್ಯ ಹುಟ್ಟು ಹಬ್ಬ ಹಾಗೂ ಕೊರೋನಾ ತಗುಲಿದ ವೇಳೆ ಬೇಗ ಗುಣಮುಖರಾಗಲೆಂದು ಮೋಳೆ ಗ್ರಾಮದಿಂದ ಐನಾಪೂರ ಸಿದ್ದೇಶ್ವರ ದೇವಸ್ಥಾನದವರೆಗೆ ದೀಡನಮಸ್ಕಾರ ಹಾಕಿ ದೇವರಲ್ಲಿ ಹರಕೆ ಹೊತ್ತುಕೊಂಡಿದ್ದ.
ಸಧ್ಯ ಸಿದ್ದರಾಮಯ್ಯ ಮೇಲಿನ ಅಭಿಮಾನವನ್ನು ಈತ ಪಾದಯಾತ್ರೆ ಮೂಲಕ ವ್ಯಕ್ತಪಡಿಸಿದ್ದು ವಿಶೇಷ.