Select Page

ಸರ್ಕಾರಿ ಶಾಲೆ ಶಿಕ್ಷಕನ ಭರತನಾಟ್ಯ ನೋಡಿ ; ನಧೀಂ ಧೀನ್ ತನ – Video

ಸರ್ಕಾರಿ ಶಾಲೆ ಶಿಕ್ಷಕನ ಭರತನಾಟ್ಯ ನೋಡಿ ; ನಧೀಂ ಧೀನ್ ತನ – Video

ಬೆಳಗಾವಿ : ನಧೀಂ ಧೀನ್ ತನ ಹಾಡು ಇತ್ತ ಸರ್ಕಾರಿ ಶಾಲೆ ಶಿಕ್ಷಕನಿಂದ ಅದ್ಬುತ ಭರತನಾಟ್ಯ ಪ್ರದರ್ಶನ. ನೆಚ್ಚಿನ ಶಿಕ್ಷಕನ ನೃತ್ಯ ನೋಡಿ ಕುಣಿದು ಕುಪ್ಪಳಿಸುತ್ತಿರುವ ಮದ್ದು‌ ಮಕ್ಕಳು. ಈ ಅದ್ಬುತ ದೃಶ್ಯ ಕಂಡುಬಂದಿದ್ದು ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ.

ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸರ್ಕಾರಿ ಶಾಲೆಗಳ ಮಹತ್ವದ ಕಾರ್ಯಕ್ರಮ ಪ್ರತಿಭಾ ಕಾರಂಜಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆ ಶಿಕ್ಷಕರೋರ್ವರು ಮಾಡಿದ ಅದ್ಬುತ ಭರತನಾಟ್ಯ ಪ್ರದರ್ಶನ ಜನರ ಗಮನ ಸೆಳೆದಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ “ ನಾಶಿ ತೋಟ ” ಸರ್ಕಾರಿ ಶಾಲೆ ಶಿಕ್ಷಕ ಪರಶುರಾಮ ವಾಯ್ ಸರಸ್ವತಿ ಎಂಬುವವರು ಮಾಡಿರುವ ಈ ಅದ್ಬುತ ಭರತನಾಟ್ಯ ಪ್ರದರ್ಶನದ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ ನಮ್ಮ ಸರ್ಕಾರಿ ಶಾಲೆಗಳು ಹಾಗೂ ಅಲ್ಲಿನ ಶಿಕ್ಷಕರ ಕಲಾತ್ಮಕ ಕೆಲಸ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂಬುದಂತು ಸ್ಪಷ್ಟ. ಮಕ್ಕಳಿಗೆ ವಿಭಿನ್ನ ರೀತಿಯಲ್ಲಿ ಮನರಂಜನೆ ನೀಡಿ ಅವರನ್ನು ರಂಜಿಸುವ ಇಂತಹ ಶಿಕ್ಷಕರ ಮತ್ತಷ್ಟು ಹೆಚ್ಚಾಗಲಿ.

Advertisement

Leave a reply

Your email address will not be published. Required fields are marked *

error: Content is protected !!