Select Page

ಪಾಕಿಸ್ತಾನದ ಚಂದ್ರಯಾನ ನೌಕೆ ಹೆಂಗೈತಿ ನೋಡ್ರಿ…! VIDEO

ಪಾಕಿಸ್ತಾನದ ಚಂದ್ರಯಾನ ನೌಕೆ ಹೆಂಗೈತಿ ನೋಡ್ರಿ…! VIDEO

ಚಂದ್ರಯಾನ – ೦೩ ಯಶಸ್ಸಿನ ನಂತರ ಭಾರತ ವಿಶ್ವದ ಮುಂದೆ ತಲೆಎತ್ತಿ ಮೆರೆಯುತ್ತುದೆ, ಈ ಸಂದರ್ಭದಲ್ಲಿ ನಮ್ಮ ವಿರೋಧಿ ರಾಷ್ಟ್ರ ಪಾಕಿಸ್ತಾನದ ಕುರಿತು ಭಿನ್ನ ಜೋಕ್ ಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ಭಾರತದ ಚಂದ್ರಯಾನ – ೦೩ ಕುರಿತು ಸ್ಟೋರಿ…

ಹೌದು ಭಾರತದ ಚಂದ್ರಯಾನ ಕುರಿತು ಇಡೀ ಜಗತ್ತು ಆಶ್ಚರ್ಯಕರವಾಗಿ ನೋಡುತ್ತಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಜೆಗಳು ಕೂಡಾ ಭಾರತದ ಸಾಧನೆ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತಮ್ಮ ದೇಶದ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ.

ಈ‌ ಕುರಿತು ಅನೇಕ ಹಾಸ್ಯ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಜೊತೆಗೆ ಅಲ್ಲಿನ ಯುವಕರು ಸೇರಿ ಚಂದ್ರಯಾನ ಮಾದರಿಯ ರಾಕೆಟ್ ಹಾರಿಸಿದ್ದು, ಈ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಇಸ್ರೋ ವಿಜ್ಞಾನಿಗಳ ಸತತ ಪ್ರಯತ್ನದ ಫಲವಾಗಿ ಭಾರತ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಆಗಸ್ಟ್ 23 ರಂದು ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ಚಂದ್ರನ ಮೇಲೆ ಪ್ರಗ್ಯಾನ್ ರೋವರ್ ಈಗಾಗಲೇ ಸಂಶೋಧನೆ ಆರಂಭಿಸಿದೆ.

ಭಾರತದ ಚಂದ್ರಯಾನ ಯಶಸ್ಸನ್ನು ಹಲವು ದೇಶಗಳು ಕೊಂಡಾಡಿದೆ. ಈಗಾಗಲೇ ಪಾಕಿಸ್ತಾನ ಕೂಡ ಭಾರತಕ್ಕೆ ಅಭಿನಂದನೆ ಸಲ್ಲಿಸಿದೆ. ಇದೀಗ ಪಾಕಿಸ್ತಾನ ಮಾಧ್ಯಮಗಳು ಭಾರತದ ಚಂದ್ರಯಾನವನ್ನು ಹೊಗಳಿದೆ.

ಇಂದು ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಎಲ್ಲಿದೆ? ಎಂದು ಪ್ರಶ್ನಿಸಿ ಪಾಕಿಸ್ತಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಪಾಕಿಸ್ತಾನದ ಜಿಯೋ ಟಿವಿ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ಭಾರತದ ಸಾಧನೆಗೆ ಸಲಾಂ ಹೇಳಿವೆ. ಜಿಯೋ ಟಿವಿಯಲ್ಲಿ ನಿರೂಪಕಿ ಹುಮಾ ಅಮೀರ್ ಶಾ ಹಾಗೂ ಅಬ್ದುಲ್ಲಾ ಸುಲ್ತಾನ್ ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.

ಭಾರತ ಈಗಾಗಲೇ ಚಂದ್ರನ ಅಂಗಳದಲ್ಲಿ ಕಾಲಿಟ್ಟಿದೆ. ಇದು ಸಾಧನೆ, ಇದು ಅಭಿವೃದ್ಧಿ. ಆದರೆ ನಾವೆಲ್ಲಿದ್ದೇವೆ? ಆಂತರಿಕ ಸಂಘರ್ಷ, ಹಣದುಬ್ಬರ, ಸ್ಥಿರ ಸರ್ಕಾರ ವಿಲ್ಲದೇ ದಿವಾಳಿಯತ್ತ ಖಜಾನೆ, ಆಹಾರ ವಸ್ತುಗಳ ಖರೀದಿ ಶಕ್ತಿ ಕಳೆದುಕೊಂಡ ಜನ ಸೇರಿದಂತೆ ಸಮಸ್ಯೆಗಳಲ್ಲೇ ಪಾಕಿಸ್ತಾನ ಮುಳುಗಿದೆ.

ಆದರೆ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ವಿಶ್ವದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಸಾಧನೆ ನಮಗೂ ಖುಷಿ ತಂದಿದೆ ಎಂದು ಜಿಯೋ ಟಿವಿ ಹೇಳಿದೆ.

Advertisement

Leave a reply

Your email address will not be published. Required fields are marked *

error: Content is protected !!