ವಿಜಯಪುರ : ಮಹಿಳಾ ವಿವಿ ಘಟಿಕೋತ್ಸವ, ತಾರಾ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
ವಿಜಯಪುರ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಮಹಿಳಾ ಸಾಧಕಿಯರಿಗೆ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜನೇವರಿ 09 ರಂದು ಮಧ್ಯಾಹ್ನ 12.30 ಕ್ಕೆ ನಡೆಯುವ 16 ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ತಿಳಿಸಿದರು.
ಹಾವೇರಿಯ ಶಿಗ್ಗಾವಿಯ ಉತ್ಸವ ರಾಕ್ ಗಾರ್ಡನ್‌ನ ಕಲಾ ಪರಿಕಲ್ಪರು ಹಾಗೂ ಕಲಾ ನಿರ್ದೇಶಕಿ ವೇದಾರಾಣಿ ದಾಸನೂರ, ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಹಾಗೂ ಚಿತ್ರನಟಿ, ಮಾಜಿ ಎಂಎಲ್ಸಿ ತಾರಾ ( Actor Tara ) ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.