ಕುಂಬಮೇಳಕ್ಕೆ ಲಕ್ಷಾಂತರ ಜನ ಭೇಟಿ ; ಓಡಾಟ ನಡೆಸಿದ ರೈಲುಗಳ ಸಂಖ್ಯೆ ಎಷ್ಟು ಸಾವಿರ ಗೊತ್ತಾ…?
ಪ್ರಯಾಗರಾಜ್ : ಐತಿಹಾಸಿಕ ಮಹಾಕುಂಭಮೇಳಕ್ಕೆ ತೆರೆ ಬಿದ್ದಿದ್ದು ದೇಶಾದ್ಯಂತ 56 ಕೋಟಿ ಗೂ ಹೆಚ್ಚು ಜನ ಪುಣ್ಯಸ್ನಾನ ಮಾಡಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಬರಲು ರೈಲು ಸಾರಿಗೆ ಅತ್ಯಂತ ಅದ್ಬುತವಾದ ಕೆಲಸ ಮಾಡಿದೆ.
45 ದಿನಗಳು ನಡೆದ ಮಹಾ ಕುಂಭಮೇಳಕ್ಕೆ ಬರುವ ಜನರಿಗೆ ಸಾರಿಗೆ ವ್ಯವಸ್ಥೆಯಾಗಿ ಭಾರತೀಯ ರೈಲು ಮಹತ್ವದ ಸೇವೆ ನೀಡಿದೆ. ಜೊತೆಗೆ ಮತ್ತೊಂದು ಐತಿಹಾಸಿಕ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಸುಮಾರು 17,000 ರೈಲುಗಳು ಓಡಾಟ ನಡೆಸಿವೆ.
ಉತ್ತರ ಪ್ರದೇಶದ ಸರ್ಕಾರ ಮಹಾಕುಂಭಮೇಳಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿತ್ತು. ಮೂಲಭೂತ ಸೌಕರ್ಯಕ್ಕೆ 5 ಸಾವಿರ ಕೋಟಿ ಹೂಡಿಕೆ ಮಾಡಿದೆ. ಕಳೆದ ಎರಡುವರೆ ವರ್ಷಗಳ ಹಿಂದೆ ತಯಾರಿ ನಡೆಸಿದ್ದ ಯುಪಿ ಸರ್ಕಾರ 21 ಕ್ಕೂ ಹೆಚ್ಚು ಪ್ಲೈ ಓವರ್ ಹಾಗೂ ಅಂಡರ್ ಪಾಸ್ ನಿರ್ಮಾಣ ಮಾಡಿತ್ತು.
13 ಸಾವಿರ ರೈಲು ಓಡಿಸುವ ಅಂದಾಜು ಹೊಂದಿದ್ದ ಸರ್ಕಾರ ಕೊನೆಗೆ 17 ಸಾವಿರಕ್ಕೆ ಏರಿಕೆಯಾಯಿತು. 7667 ವಿಶೇಷ ರೈಲು ಹಾಗೂ 9485 ನಿಯಮಿತ ರೈಲು ಓಡಾಟ ಮಾಡಿದ್ದು, ಯೋಗಿ ಸರ್ಕಾರ ಕೊಟ್ಟ ಸವಲತ್ತುಗಳಿಗೆ ಜನ ಜೈಕಾರ ಹಾಕಿದ್ದಾರೆ.


