
ಮಾಜಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ ; ರೋಗಿಗಳಿಗೆ ಹಣ್ಣು ವಿತರಣೆ

ಯರಗಟ್ಟಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 83ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಸವದತ್ತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ರೈತ ಹಾಗೂ ಜನಪರ ಹೋರಾಟದ ಮೂಲಕವೇ ರಾಜಕಾರಣ ಆರಂಭಿಸಿದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಕಂಡಂತಹ ಧೀಮಂತ ರಾಜಕಾರಣಿಯಾಗಿದ್ದಾರೆ.
ಶಾಸಕರಾಗಿ, ವಿಪಕ್ಷ ನಾಯಕರಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದಂತಹ ಯಡಿಯೂರಪ್ಪ ಅವರು ಅವಧಿಯಲ್ಲಿ ಉತ್ತಮ ಆಡಳಿತವನ್ನು ನೀಡಿ. ಜನಪರ ಬಜೆಟ್ ಮಂಡಿಸಿದ ಹೆಮ್ಮೆ ಅವರದು ಎಂದು ಹೇಳಿದರು.
ಈ ವೇಳೆ ಮಾಜಿ ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣ ಚಂದರಗಿ, ವೆಂಕಟೇಶ ದೇವರೆಡ್ಡಿ, ಪರ್ವತಗೌಡ ಪಾಟೀಲ, ಡಾ. ನಯನಾ ಭಸ್ಮೆ, ಚಂದ್ರು ಅಳಗೊಡಿ, ಮಹಾದೇವ ಮುರಗೋಡ, ಅಶೋಕ ಹುಂಡೇಕರ, ಈರಣ್ಣ ವೀರಶೆಟ್ಟಿ, ಕುಮಾರ ಮಾಲಮನೆ,
ಶೇಖಪ್ಪ ಹರಳಿ, ಮೈತ್ರಾ ಹೊಂಗಲ, ಸಕ್ಕುಬಾಯಿ ಕುಂಬಾರ, ಫಕೀರಪ್ಪ ನಡುವಿನ, ಶ್ರೀಧರ ಉದಗಟ್ಟಿ, ಸದಾನಂದ ಪಾಟೀಲ, ಡಾ. ಮೇಘರಾಜ ಶೀಲವಂತ ಹಾಗೂ ಇನ್ನಿತರರು ಹಾಜರಿದ್ದರು.