Select Page

Advertisement

ಎ ಕಿಡ್ಸ್ ಫ್ರೀ ಸ್ಕೋಲ್ ನಲ್ಲಿ ಗಮನಸೆಳೆದ ಬಾಲರಾಮ ವೇಷತೊಟ್ಟ ಪುಟಾಣಿಗಳು

ಎ ಕಿಡ್ಸ್ ಫ್ರೀ ಸ್ಕೋಲ್ ನಲ್ಲಿ ಗಮನಸೆಳೆದ ಬಾಲರಾಮ ವೇಷತೊಟ್ಟ ಪುಟಾಣಿಗಳು

ಬೆಂಗಳೂರು : ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ರಾಜ್ಯಾದ್ಯಂತ ಸಡಗರ ಮನೆಮಾಡಿತ್ತು.‌ ಈ ಹಿನ್ನಲೆಯಲ್ಲಿ ನಗರದ ಅತ್ತಿಬೆಲೆಯಲ್ಲಿರುವ ಎ ಕಿಡ್ಸ್ ಫ್ರೀ ಸ್ಕೋಲ್ ನಲ್ಲಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿಸಿ ರಾಮನಾಮ ಮಾಡಲಾಯಿತು.

ಸೋಮವಾರ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ರಾಮ, ಸೀತೆ ಹಾಗೂ ಶಬರಿಯ ವೇಷದಲ್ಲಿ ಗಮನಸೆಳೆದರು.‌ ಈ ಕಾರ್ಯಕ್ರಮದ‌ ಮೂಲಕ ಮಕ್ಕಳಿಗೆ ಧಾರ್ಮಿಕ ಇತಿಹಾಸ ಕಥೆಗಳನ್ನು ತಿಳಿಸುವ ಪುಟ್ಟ ಪ್ರಯತ್ನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ಶಬರಿ ಹಾಗೂ ಪ್ರಭು ಶ್ರೀರಾಮಚಂದ್ರನ ಭೇಟಿಯ ಸನ್ನಿವೇಶ. ರಾಮ ಆಸ್ಥಾನದಲ್ಲಿ ವಿರಾಜಮಾನರಾದ ಸಂದರ್ಭ ಸೇರಿದಂತೆ ಅನೇಕ ಪ್ರಸಂಗಗಳು ನೋಡುಗರ ಕಣ್ಮನಸೆಳೆದವು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಸಂತೋಷ್ ಸೇರಿದಂತೆ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!