
ಸಾಹುಕಾರ್ ಭೇಟಿಯಾದ ಹನುಮಂತ ; ಸರಳ ಜೀವಿಗಳ ಸಮಾಗಮ ಎಂದ ಅಭಿಮಾನಿಗಳು

ಬೆಳಗಾವಿ ವಾಯ್ಸ್ : ಬಿಗ್ ಬಾಸ್ ಕನ್ನಡ ವಿಜೇತ ಹನುಮಂತ ಲಮಾಣಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಗೃಹ ಕಚೇರಿಗೆ ತೆರಳಿದ ಹನುಮಂತ ಅವರು ಸಚಿವರನ್ನು ಭೇಟಿಯಾಗಿ ಅವರ ಜೊತೆ ಪೋಟೋ ಗೆ ಪೋಸ್ ಕೊಟ್ಟಿದ್ದಾರೆ.
ಹನುಮಂತ ಸಚಿವರ ಭೇಟಿ ಮಾಡಿದ್ದಕ್ಕೆ ಅವರ ಅಭಿಮಾನಿಗಳು ಖುಷಿಯಿಂದ ಕೆಲ ಕಾಮೆಂಟ್ ಹಾಕಿದ್ದಾರೆ. ಇದರಲ್ಲಿ ಅನೇಕರು ಸರಳ ವ್ಯಕ್ತಿಗಳ ಸಮಾಗಮ ಎಂದೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.