ಬೆಳಗಾವಿ ಬಿಮ್ಸ್ ಗೆ ದೇಶದಲ್ಲೇ 12 ನೇ ಸ್ಥಾನ : ಔಟ್ ಲುಕ್ ವರದಿ ಪ್ರಕಟ
ಬೆಳಗಾವಿ : ಇತ್ತೀಚಿಗೆ ಪ್ರಕಟವಾಗ ಔಟ್ ಲುಕ್ ಮ್ಯಾಗಜಿನ್ ಪ್ರಕಾರ ಸರಕಾರಿ ವೈದ್ಯಕೀಯ ವಿದ್ಯಾಲಯ ರ್ಯಾಂಕಿಂಗ್ ಪ್ರಕಟವಾಗಿದ್ದು, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ 12 ನೇ ಸ್ಥಾನ ಪಡೆದುಕೊಂಡಿದೆ.
ಈ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮಾಹಿತಿ ನೀಡಿರುವ ಬಿಮ್ಸ್. ಜುಲೈ 2022 ರಲ್ಲಿ ಪ್ರಕಟವಾದ ಔಟ್ ಲುಕ್ ಮ್ಯಾಗಜೀನ್ ಹೊರಡಿಸಿದ ಐ ಕೇರ್ ದೇಶದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ರ್ಯಾಂಕಿಂಗ್ ನಲ್ಲಿ ಬೆಳಗಾವಿ ಬಿಮ್ಸ್ 12 ನೇ ಸ್ಥಾನ ಪಡೆದುಕೊಂಡಿದೆ.
ಔಟ್ ಲುಕ್ ನೀಡಿರುವ ರ್ಯಾಂಕಿಂಗ್ ಅನ್ವಯ. ಬಿಮ್ಸ್ ಶೈಕ್ಷಣಿಕ ಮಟ್ಟದಲ್ಲಿ ಏಳನೇ ಸ್ಥಾನ, ಮೂಲಭೂತ ಸೌಕರ್ಯಗಳಲ್ಲಿ 5 ನೇ ಸ್ಥಾನ, ಆಡಳಿತ ಹಾಗೂ ಪ್ರವೇಶಾತಿಯಲ್ಲಿ 12 ನೇ ಸ್ಥಾನದೊಂದಿದೆ. ಒಟ್ಟಾರೆಯಾಗಿ ದೇಶದ ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳ ಪೈಕಿ 12 ನೇ ಸ್ಥಾನ ಪಡೆದುಕೊಂಡಿದೆ.
ಬಿಮ್ಸ್ ಹೊಸ ದೆಹಲಿಯ ಏಮ್ಸ್, ಪುಣೆಯ ಎಫ್ ಎಮ್ ಸಿ, ಜಿಪ್ಮೆರ್ ಪಾಂಡಿಚೆರಿ ಸಂಸ್ಥೆಗಳ ಸಾಲಿನಲ್ಲಿ ಕರ್ನಾಟಕ ಬಿಮ್ಸ್ ಗುರುತಿಸಿಕೊಂಡಿದ್ದು ಹೆಮ್ಮೆಯ ವಿಷಯ ಎಂದು ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.
***********
ದೇಶದಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆ ಎಲ್ಲರಿಗೂ ಮಾದರಿ ಆಗಲಿ, ದೇಶದಲ್ಲೇ ಸರ್ಕಾರಿ ಆಸ್ಪತ್ರೆಗಳ ಪೈಕಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಇಂದು 12ನೇ ಸ್ಥಾನ ಪಡೆದಿದ್ದು ಸಂತಸದ ವಿಷಯ. ಬರುವ ಒಂದು ವರ್ಷದಲ್ಲಿ ಬಿಮ್ಸ್ ಆಸ್ಪತ್ರೆಯನ್ನು 5 ನೇ ಸ್ಥಾನಕ್ಕೆ ತರಲು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು.
ಅನಿಲ್ ಬೆನಕೆ
ಶಾಸಕ – ಬೆಳಗಾವಿ ಉತ್ತರ