
ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಹೊಂದಿದ್ದ ಗೋಡಂಬಿ ಕಾಕಾ ನಿಧನ

ವಿಜಯಪುರ : ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯ ವೀಡಿಯೋ ಮಾಡಿಕೊಂಡು ಜನರನ್ನು ರಂಜಿಸುವ ಕೆಲಸ ಮಾಡುತ್ತಿದ್ದ ಗೋಡಂಬಿ ಕಾಕಾ ಖ್ಯಾತಿಯ ಬಸಲಿಂಗಯ್ಯ ಚೆನ್ನಬಸಯ್ಯ ಹಿರೇಮಠ ಅವರು ನಿಧನ ಹೊಂದಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದರಾಗಿದ್ದ ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಾಗೂರು ಗ್ರಾಮದವರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿದ್ದಾರೆ.
19 ವಯಸ್ಸಿನಲ್ಲಿ ಬಣ್ಣ ಹಚ್ಚಿದ ಇವರು 40 ವರ್ಷಗಳ ಕಾಲ ರಂಗಭೂಮಿ ಕಲಾವಿದರಾಗಿ ಬೈಲಾಟಗಳಲ್ಲಿ ನಟಿಸುವ ಮೂಲಕ ಕಲಾಪ್ರೇಮಿಗಳನ್ನ ರಂಜಿಸಿದ್ದರು. ರಂಗಭೂಮಿ ಕಲಾವಿದರಿಗೆ ಅವಕಾಶ ಕಡಿಮೆಯಾದಂತೆ ಸೋಶಿಯಲ್ ಮೀಡಿಯಾ ಮೂಲಕ ರಂಜನೆ ಮುಂದುವರಿಸಿದ್ದರು.
ತಮ್ಮ ವೃದ್ಧಾಪ್ಯದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದ ಗೋಡಂಬಿ ಕಾಕಾ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗೋಡಂಬಿ ಕಾಕಾ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೆಯಾದ ಕಾಮಿಡಿ ಕಂಟೆಂಟ್ ಮೂಲಕ ಸದ್ದು ಮಾಡಿದ್ದ ಗೋಡಂಬಿ ಕಾಕಾ ಸಾವು ಅಭಿಮಾನಿಗಳಲ್ಲಿ ನೋವು ತಂದಿದೆ… ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಬೀದರ್, ಹುಬ್ಬಳ್ಳಿ ವರೆಗು ಗೋಡಂಬಿ ಕಾಕಾ ಎಂದೆ ಪ್ರಸಿದ್ಧಿ ಪಡೆದಿದ್ದ ಬಸಲಿಂಗಯ್ಯ ಹಿರೇಮಠ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಯುಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋ ಅಪ್ಲೇಡ್ ಮಾಡಿದ್ದರು. 5 ದಿನಗಳ ಹಿಂದೆ ತಮ್ಮ ಅಭಿಮಾನಿಗಳಲ್ಲಿ ನಾನು ಬಡವ, ನನ್ನ ವಿಡಿಯೋ ವೀಕ್ಷಣೆ ಮಾಡಿ, ಶೇರ್ ಮಾಡುವ ಮೂಲಕ ಬೆಂಬಲಿಸಿ ಎಂದು ಸಹಾಯವನ್ನು ಮಾಡುವಂತೆ ಕೇಳಿಕೊಂಡಿದ್ದರು.