
ಅಂದು ಡಿ.ಕೆ ಇಂದು ಸಿ.ಟಿ : ಶಿವ ದರ್ಶನದ ವಿಶೇಷತೆ ಏನು….?

ಐತಿಹಾಸಿಹ ಹಿನ್ನಲೆ ಹೊಂದಿರುವ ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ರಾಜ್ಯ ರಾಜಕಾರಣದ ಖ್ಯಾತನಾಮರು ಭೇಟಿನೀಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಭೇಟಿ ನಂತರ ಸಧ್ಯ ಬಿಜೆಪಿ ಫೈಯರ್ ಬ್ರ್ಯಾಂಡ್ ಸಿ.ಟಿ ರವಿ ಭೇಟಿ ನೀಡಿದ್ದಾರೆ.
ಹೌದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿರುದ್ಧ ಅಶ್ಲೀಲ ಪದಬಳಕೆ ಪ್ರಜರಣದ ನಂತರ ನಡೆದ ಬೆಳವಣಿಗೆ ನಂತರ ಇದೇ ಮೊದಲಬಾರಿಗೆ ಸಿ.ಟಿ ರವಿ ಬೆಳಗಾವಿಗೆ ಭೇಟಿ ನೀಡಿದರು. ಈ ಭೇಟಿ ಮಧ್ಯೆ ಕಪಿಲೇಶ್ವರ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದು ಇನ್ನೊಂದು ವಿಶೇಷ.
ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ ಅವರು ಈ ಹಿಂದೆ ನಗರದ ಕಪಿಲೇಶ್ವರ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದರು. ಜೊತೆಗೆ ಐತಿಹಾಸಿಕ ಗಾಂಧಿ ಭಾರತ ಸಮಾವೇಶದ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಮಹಾ ಕುಂಭಮೇಳಕ್ಕೆ ತೆರಳುವ ನಿರ್ಧಾರವನ್ನು ಕಪಿಲೇಶ್ವರ ಸನ್ನಿಧಿಯಲ್ಲಿ ಘೋಷಣೆ ಮಾಡಿದ್ದು ಮತ್ತೊಂದು ವಿಶೇಷ.
ಸಧ್ಯ ಸಿ.ಟಿ ರವಿ ಅವರು ಕಪಿಲೇಶ್ವರ ಸನ್ನಿಧಿಗೆ ಭೇಟಿನೀಡಿ ಪೂಜೆ ಸಲ್ಲಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಬಳಸಿದ್ದ ಅಶ್ಲೀಲ ಪದ ವಿರುದ್ಧ ರಾಜ್ಯಾದ್ಯಂತ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು. ನಂತರದ ರಾಜಕೀಯ ಬೆಳವಣಿಗೆ ಅವರಿಗೆ ಎಷ್ಟೇ ಲಾಭ ನೀಡಿರಬಹುದು ಆದರೆ ಆ ಪದಬಳಕೆ ಮಾತ್ರ ಅವರನ್ನು ಕಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ರಾಜಕೀಯ ಏಳ್ಗೆ….ಶತ್ರು ನಾಶ…ಲೋಕಕಲ್ಯಾಣ…ಸೇರಿದಂತೆ ನಾನಾ ರೀತಿಯಲ್ಲಿ ಆಂತರಿಕ ನೆಮ್ಮದಿ ಪಡೆಯುವ ಉದ್ದೇಶದಿಂದ ಶಿವ ಪೂಜೆ ಕೈಗೊಳ್ಳುವುದು ಸಾಮಾನ್ಯ. ಇದೇ ರೀತಿಯಲ್ಲಿ ಮಾಜಿ ಸಚಿವ ಸಿ.ಟಿ ರವಿ ಅವರ ಕಪಿಲೇಶ್ವರ ದೇವಸ್ಥಾನದ ಭೇಟಿಯೂ ಸಾಕಷ್ಟು ಕುತೂಹಲ ಮೂಡಿಸಿದೆ.