
ಮಳೆ ಅವಾಂತರ ತಗ್ಗಿಸಲು ತ್ವರಿತ ಕ್ರಮ : ಆಯುಕ್ತ ಪಿ.ಎನ್.ಲೋಕೇಶ್

ಬೆಳಗಾವಿ : ಮಳೆಗಾಲದ ಅವಾಂತರ ತಗ್ಗಿಸಲು ಪಾಲಿಕೆಯಿಂದ ನಾಲ್ಕು ತಂಡವನ್ನು ರಚಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾದರೆ ಪಾಲಿಕೆಯ ಹೆಲ್ಪ್ ಲೈನ್ 0831- 2405316ಗೆ ಕರೆ ಮಾಡಬಹುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ್ ಹೇಳಿದರು.
ಮಂಗಳವಾರ ಪಾಲಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಳೆಗಾಲದ ಅವಾಂತರ ತಗ್ಗಿಸಲು ಪಾಲಿಕೆಯಿಂದ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
ಯಾವ ಇಲಾಖೆಯ ತಪ್ಪಿನ ಕಾರಣಕ್ಕೆ ಮಳೆಯ ನೀರಿನಿಂದ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಈ ಸಮಯದಲ್ಲಿ ದೂರಲು ಇಷ್ಟ ಪಡುವುದಿಲ್ಲ. ಸಾರ್ವಜನಿಕರಿಗೆ ಮಳೆಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಪಾಲಿಕೆಯಿಂದ ನಾಲೆ ಹಾಗೂ ಚರಂಡಿಗಳನ್ನು ಶುಚಿಗೊಳಿಸಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ನೀವು ಪಾಲಿಕೆಯೊಂದಿಗೆ ಸಹಕಾರ ಕೊಡುವುದು ಅಗತ್ಯವಾಗಿದೆ ಎಂದರು.
ಇನ್ನೂ ಬೆಳಗಾವಿ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಯ ಚುನಾವಣೆಯ ಅವಧಿ ಜೂನ್ ತಿಂಗಳಿಗೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ನಡೆಸುವಂತೆ ಪಾಲಿಕೆಯಿಂದ ಮನವಿ ಮಾಡಲಾಗಿದೆ ಎಂದರು.