ಸಿರ್ಫ್ ಹೋಮ್ ಮೆಡ್ ಆ್ಯಪ್ ಲೋಕಾರ್ಪಣೆಗೊಳಿಸಿದ ಸಂಸದೆ ಅಂಗಡಿ
ಬೆಳಗಾವಿ : ಆಧುನಿಕ ದಿನಮಾನಗಳಲ್ಲಿ ಉತ್ತಮ ಗುಣಮಟ್ಟದ ಮನೆಯ ಆಹಾರವನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಸಿರ್ಫ್ ಹೋಮ್ ಮೆಡ್ ಆ್ಯಪ್ ಸಿದ್ಧಪಡಿಸಿದ್ದು ಇದನ್ನು ಬೆಳಗಾವಿ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸದೆ ಮಂಗಳಾ ಅಂಗಡಿ ಹೇಳಿದರು.
ಅವರು ಸೋಮವಾರ ನಗರದಲ್ಲಿ ಸಿರ್ಫ್ ಹೋಮ್ ಮೆಡ್ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದರು. ಬೆಳಗಾವಿ ಜನರ ಅಭಿರುಚಿಗೆ ತಕ್ಕಂತೆ ಮನೆಯಲ್ಲಿ ಸಿದ್ಧಪಡಿಸಲಾದ ಆಹಾರವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮಹಿಳೆಯರೇ ಸೇರಿಕೊಂಡು ಮಾಡಿರುವ ಹೋಮ್ ಮೆಡ್ ಆ್ಯಪ್ ಈಗಾಗಲೇ ಹುಬ್ಬಳ್ಳಿ-ಧಾರವಾಡ, ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಳಗಾವಿಯಲ್ಲಿಯೂ ಇದನ್ನು ಬಿಡುಗಡೆ ಮಾಡಿದ್ದು ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮನೆಯಲ್ಲಿಯೇ ಆಹಾರ ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದಾರೆ. ಎಲ್ಲ ಬಗೆಯ ಅಲ್ಪೋಪಹಾರ, ಉಪಹಾರ, ಬೇಕರಿ ಖಾದ್ಯಗಳನ್ನು ಮನೆಯಲ್ಲಿಯೇ ಸಿದ್ದಪಡಿಸಿದ್ದಾರೆ. ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಮನೆಯ ಆಹಾರವನ್ನು ಬಯಸುತ್ತಾರೆ. ಬೆಳಗಾವಿ ನಗರದಲ್ಲಿ ಸಾಕಷ್ಟು ಜನ ಉದ್ಯೋಗ, ಶೈಕ್ಷಣಿಕ ಸಲುವಾಗಿ ಆಗಿಸುತ್ತಾರೆ. ಅವರಿಗೆ ರುಚಿಗೆ ತಕ್ಕಂತೆ ಸೇವೆ ನೀಡುವಂತಾಗಲಿ ಎಂದರು.
ಹುಬ್ಬಳ್ಳಿ ಧಾರವಾಡ, ಗೋವಾದಲ್ಲಿ ಪ್ರಾರಂಭವಾಗುತ್ತದೆ. ಇದೇ ಮೊದಲಬಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾರಂಭ ಮಾಡಿದ್ದಾರೆ. ಇದು ಉನ್ನತ ಮಟ್ಟದಲ್ಲಿ ಬೆಳೆಯಲ್ಲಿ ಎಂದು ಶುಭ ಹಾರೈಸಿದರು.
ಡಾ.ಸೋನಾಲಿ ಪುಟೆ ಮಾತನಾಡಿ, ಆಹಾರದ ಗುಣಮಟ್ಟ ಹಾಗೂ ಗ್ರಾಹಕರಿಗೆ ರುಚಿಗೆ ಅನುಗುಣವಾಗಿ ಸಿಫ್9 ಹೋಮ್ ಮೆಡ್ ಆ್ಯಪ್ ಕೆಲಸ ನಿರ್ವಹಿಸಲಿದೆ. ಹೋಟೆಲ್ ಊಟಕ್ಕಿನ ಮನೆಯ ಊಟ ಅತ್ಯಂತ ಗುಣಮಟ್ಟದಾಗಿರುತ್ತದೆ. ಅದರ ವಿತರಣೆ ಮಾಡಲು ನಮ್ಮ ಬಳಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಹಾರ ದರವನ್ನು ಅಡುಗೆ ಮಾಡುವವರು ನಿರ್ಧಾರ ಮಾಡುತ್ತಾರೆ ಜನರಿಗೆ ಉತ್ತಮ ಹಾಗೂ ಸುಸಜ್ಜಿತ ಆಹಾರ ಕೊಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಆಶಾ ಪೋಪಳೆ, ಅಶೋಕ ಪೋಪಳೆ, ಗುರುದೇವ ಕೋರೆ, ನೀತಿ ಕೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.