ದಿ. ಸುರೇಶ್ ಅಂಗಡಿ ಪ್ರತಿಮೆ ಅನಾವರಣ
ಬೆಳಗಾವಿ : ಮಾಜಿ ಕೇಂದ್ರ ಸಚಿವ ದಿ. ಸುರೇಶ್ ಅಂಗಂಡಿ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಗಡಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪ್ರತಿಮೆ ಅನಾವರಣ ಮಾಡಿದರು.
ಕೊರೊನಾ ಮಹಾಮಾರಿಯಲ್ಲಿ ಕಳೆದ ವರ್ಷ ನಿಧನರಾಗಿದ್ದ ಮಾಜಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿಯವರ ಪ್ರತಿಮೆಯನ್ನು ಭಾನುವಾರ ಸಿಎಂ ಬೊಮ್ಮಾಯಿ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂಸದೆ ಮಂಗಲಾ ಅಂಗಡಿ, ಸಚಿವರಾದ ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ. ಪರಿಷತ್ ಸಚೇತಕ ಮಹಾಂತೇಶ ಕವಠಗಿಮಠ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ, ಶಾಸಕ ಅನೀಲ್ ಬೆನಕೆ, ಅಭಯ್ ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.