ಈ ಸುಂದರ ಬೆಳದಿಂಗಳ… ಈ ತಂಪಿನ ಅಂಗಳದಲಿ….ತಿನಿಸು ಕಟ್ಟೆಯಲ್ಲಿ ಕಲ್ಯಾಣ್ ಹಕ್ಕಿಗಳ ಕಲರವ
ಬೆಳಗಾವಿ : ಖ್ಯಾತ ಗೀತ ರಚನೆಕಾರ ಹಾಗೂ ಸಂಗೀತ ಸಂಯೋಜಕ ಕೆ. ಕಲ್ಯಾಣ ವಿಕೇಂಡ್ ಹಿನ್ನೆಲೆಯಲ್ಲಿ ಶನಿವಾರ ನಗರದ ಬಸವೇಶ್ವರ ವೃತದಲ್ಲಿರುವ ತಿನಿಸು ಕಟ್ಟೆಯಲ್ಲಿ ಜನಸಾಮಾನ್ಯರಂತೆ ಸುತ್ತಾಡಿ ಖಾಧ್ಯಗಳನ್ನು ಸವಿದರು.
ಕೆ ಕಲ್ಯಾಣ್ ದಂಪತಿಗಳು ನಗರದ ತಿನಿಸು ಕಟ್ಟೆಯಲ್ಲಿ ಸಾಮಾನ್ಯರಂತೆ ಸುತ್ತಾಡಿ ವಿವಿಧ ಖಾಧ್ಯಗಳ ಮಳಿಗೆಗಳಿಗೆ ಭೇಟಿ ನೀಡಿ, ತಮಗೆ ಇಷ್ಟವಾದ ಖಾಧ್ಯಗಳನ್ನು ಸವಿದ ಜೋಡಿ ಹಕ್ಕಿಯ ಕಲರವ ಎಲ್ಲರ ಕಣ್ಣು ಕುಕ್ಕುವಂತಿತ್ತು.
ಸಂಗೀತ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಕೆ ಕಲ್ಯಾಣ ಲೆಕ್ಕವಿಲ್ಲದಷ್ಟು ಹಾಡುಗಳಿಗೆ ಭಾವ ತುಂಬಿದ್ದಾರೆ. ಮುಂದೆಯೂ ಅವರಿಂದ ಹೊಸ ಹೊಸ ಗೀತೆಗಳು ಬರಲಿ ಎಂಬುದು ಎಲ್ಲರ ಆಶಯ.