
1935 ರ ನಂತರ ಮೊದಲಬಾರಿ ಇಬ್ಬರು ಪತ್ರಕರ್ತರಿಗೆ ನೊಬೆಲ್ ಪ್ರಶಸ್ತಿ

ಓಸ್ಲೊ : 1935 ರ ನಂತರ ಇದೇ ಮೊದಲಬಾರಿಗೆ ಇಬ್ಬರೂ ಪತ್ರಕರ್ತರಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ಶ್ರಮಿಸಿದ್ದ ಪತ್ರಕರ್ತರಾದ ಫಿಲಿಪೀನ್ಸ್ ನ ಮರಿಯಾ ರೆಸ್ಸಾ ಹಾಗೂ ರಷ್ಯಾದ ಡಿಮಿಟ್ರಿ ಮುರಾಟೊವ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ.
2012 ರಲ್ಲಿ ಆರಂಭವಾದ ರಾಪ್ಲರ್ ಎಂಬ ನ್ಯೂಸ್ ವೆಬ್ ಪೋರ್ಟಲ್ ನ ಸಹ ಸಂಸ್ಥಾಪಕರಾದ ಮರಿಯಾ ರೆಸ್ಸಾ ಹಾಗೂ 1993 ರಲ್ಲಿ ಸ್ಥಾಪನೆಯಾಗಿದ್ದ ರಷ್ಯಾದ ಸ್ವತಂತ್ರ ಪತ್ರಿಕೆ ನೊವಾಯಾ ಗೆಜೆಟಾ ಸ್ಥಾಪಕರಲ್ಲಿ ಒಬ್ಬರಾದ ಡಿಮಿಟದರಿ ಮುರಾಟೊವ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
ನೊಬೆಲ್ ಪ್ರಶಸ್ತಿ ಸ್ಥಾಪಿಸಿದ ಆಲ್ ಫ್ರೆಡ್ ನೊಬೆಲ್ ಅವರ ಪುಣ್ಯಸ್ಮರಣೆಯಾದ ಡಿಸೆಂಬರ್ 10 ರಂದು ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿ ಚಿನ್ನದ ಪದಕ ಸೇರಿ (8.55) ಕೋಟಿ ನಗದು ರೂ. ಹೊಂದಿರುತ್ತದೆ. ಈ ಹಿಂದೆ ಜರ್ಮನಿಯ ಪತ್ರಕರ್ತ ಕಾರ್ಲ್ ವಾನ್ ಒಸಿಟೆಸ್ಕಿ ಅವರು ತಮ್ಮ ದೇಶ ಜಾಗತಿಕ ಯುದ್ಧದ ನಂತರ ಯಾವ ರೀತಿಯಲ್ಲಿ ಶಸ್ತ್ರಸಜ್ಜಿತ ವಾಯಿತು ಎಂಬುದನ್ನು ಜಗತ್ತಿಗೆ ತಿಳಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.