ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿ ಪ್ರಧಾನಿ ಭೇಟಿಯಾದ ವಿಜಯೇಂದ್ರ
ನವದೆಹಲಿ : ಕರ್ನಾಟಕ ಬಿಜೆಪಿ ಸಾರಥ್ಯ ವಹಿಸಿದ ನಂತರ ಇದೇ ಮೊದಲಬಾರಿಗೆ ಯುವ ನಾಯಕ ಬಿ.ವೈ ವಿಜಯೇಂದ್ರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಈಗಾಗಲೇ ರಾಜ್ಯ ಬಿಜೆಪಿ ಸಾರಥ್ಯ ವಹಿಸಿರುವ ವಿಜಯೇದ್ರ ಅವರಿಗೆ ಮುಂಬರುವ ಲೋಕಸಭಾ ಚುನಾವಣೆ ಮಹತ್ವದ ಟಾಸ್ಕ್ ಆಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ವಿಜಯೇಂದ್ರ ಅವರು ಪ್ರಧಾನಿ ಮೋದಿ ಭೇಟಿ ಮಾಡಿದ್ದು ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ನಂತರ ಹೆಚ್ ಡಿ ಕೆ ಕುಟುಂಬ ಮೋದಿಯವರನ್ನು ಭೇಟಿ ಮಾಡಿದೆ. ಈಗಾಗಲೇ ಟಿಕೆಟ್ ಹಂಚಿಕೆ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ ಈ ನಡುವೆ ವಿಜಯೇಂದ್ರ ಭೇಟಿ ಮಹತ್ವ ಪಡೆದಿದೆ.

