ಡಿ.ಕೆ ಶಿವಕುಮಾರ್ ಶಾಲೆಗೆ ಹುಚ್ಚಾವೆಂಕಟ್ ಹೆಸರಲ್ಲಿ ಬಾಂಬ್ ಕರೆ
ಬೆಂಗಳೂರು : ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಿರುವ ವಿದ್ಯಾಸಂಸ್ಥೆಗೆ ಬಾಂಬ್ ಕರೆ ಬಂದಿದ್ದು, ಚಿತ್ರನಟ ಹುಚ್ಚಾವೆಂಕಟ್ ಹೆಸರಿನ ಮೇಲ್ ನಿಂದ ಬಾಂಬ್ ಕರೆ ಬಂದಿರುವುದಾಗಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇವರು.
ನಾನು ಅಧ್ಯಕ್ಷನಾಗಿರುವ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಗೆ ಹುಚ್ಚಾವೆಂಕಟ್ ಹೆಸರಿನಿಂದ ಮೇಲ್ ಬಂದಿದ್ದು ಅಲ್ಲಿ ಬಾಂಬ್ ಇರುವುದಾಗಿ ಇದೆ. ಈಗಾಗಲೇ ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರ ಮಾಡಿದ್ದು ಪೊಲೀಸ್ ಸೆಕ್ಯುರಿಟಿ ನೀಡಲಾಗಿದೆ ಎಂದರು.
ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಗೆ ಬಾಂಬ್ ಕರೆ ಬಂದಿದೆ.
ಮಕ್ಕಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು ಪೋಷಕರಿಗೆ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಧೈರ್ಯ ಹೇಳುತ್ತಿರುವ ವೀಡಿಯೋ ವೈರಲ್ ಆಗಿತ್ತು.