ರಾಯಲ್ ರಾಜಸ್ಥಾನ ಪ್ಯಾಶನ್ ಶೋ ನಲ್ಲಿ ಎಲ್ಲರ ಗಮನಸೆಳೆದ ಆಯುಶ್
ಬೆಳಗಾವಿ : ಜೈಪುರದಲ್ಲಿ ನಡೆದ ರಾಯಲ್ ರಾಜಸ್ಥಾನ ಪ್ಯಾಶನ್ ಶೋ ಹಾಗೂ ಮ್ಯಾಕ್ಸ್ ಪ್ಯಾಶನ್ ಕಂಪನಿ ಸಹಭಾಗಿತ್ವದ ಮೂರನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಪುಟಾಣಿ ಮಾಡೆಲ್ ಆಯುಶ್ ಎಲ್ಲರ ಗಮನ ಸೆಳೆದಿದ್ದು, ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಪ್ರಿಲ್ 16 ರಂದು, ಜೈಪುರದ ಗುಲಾಬಿ ಪ್ಯಾಲೇಸ್ ನಲ್ಲಿ ನಡೆದ ರಾಯಲ್ ರಾಜಸ್ಥಾನ ಪ್ಯಾಶನ್ ಶೋ ಮೂರನೇ ಆವೃತ್ತಿಯಲ್ಲಿ ಬೆಳಗಾವಿ ಹೆಮ್ಮೆಯ ಪೋರ ಆಯುಶ್ ಹೊಸಕೋಟಿಗೆ ಟ್ಯಾಲೆಂಟೆಡ್ ಕಿಡ್ ಇನ್ ಇಂಡಿಯಾ ಎಂದು ವಿಶೇಷ ಆಹ್ವಾನಿತರಾಗಿದ್ದು ವಿಶೇಷ. ಒಟ್ಟು 45 ಪುಟಾಣಿಗಳು ಈ ಸ್ಪರ್ಧೆಯಲ್ಲಿ ಭಸಗವಹಿಸಿದ್ದರು. ಇಲ್ಲಿ ಆಯುಶ್ ಹೊಸಕೋಟಿಗೆ ಎಮ್ ಟಿ ವ್ಹಿ ಸ್ಟಾರ್( Donalt britz ) ಸನ್ಮಾನ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿರುವ ಕುಂದಾನಗರಿ ಕುವರ : ಬೆಳಗಾವಿ ನಗರದ ದಂಪತಿಗಳಾದ ರೂಪಾಲಿ ಹೊಸಕೋಟಿ ಹಾಗೂ ರಾಜೇಂದ್ರ ಹೊಸಕೋಟಿ ಅವರ ಆಯುಶ್ ಹೊಸಕೋಟಿ. ಈ ಪುಟಾಣಿ ಹುಡುಗನ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈತನ ಅಭಿನಯ ಹಾಗೂ ಮಾಡೆಲಿಂಗ್ ವಿಭಾಗದಲ್ಲಿ ತೋರುತ್ತಿರುವ ನಿಷ್ಠೆ ಈ ಮಟ್ಟಿಗೆ ಬೆಳೆಸಿದೆ. ಈತನಿಗೆ ಹೆಚ್ಚಿನ ತರಬೇತಿಯನ್ನು ಇವರ ತಾಯಿ ಮನೆಯಲ್ಲೇ ನೀಡುತ್ತಿದ್ದಾರೆ.
ಈ ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಆಯುಶ್ ತನ್ನ ಪ್ರತಿಭೆ ತೋರಿಸಿದ್ದು ದೇಶಾದ್ಯಂತ ಹೆಸರು ಮಾಡಿದ್ದಾನೆ. ಪ್ರತಿಷ್ಠಿತ ಅಮೇಜಾನ್, ಪ್ಲಿಪಕಾರ್ಟ, ಮಂತ್ರಾ ಕಂಪನಿಯ ಜಾಹಿರಾತಿನಲ್ಲಿ ಅಭಿನಯಿಸಿರುವ ಈ ಪೋರ ಸಧ್ಯ ಅತ್ಯಂತ ಬಹು ಬೇಡಿಕೆ ಪುಟಾಣಿ ಮಾಡೆಲ್ ಎಂಬ ಹಿರಿಮಗೆ ಪಾತ್ರರಾಗಿದ್ದಾನೆ.
ಗ್ಲೋಬಲ್ ಕಿಡ್ಸ್ ಪೆಜೆಂಟ್ ವರ್ಡ ಇವೆಂಟ್ ಭಾರತದ ಪ್ರತಿನಿಧಿಸುತ್ತಿರುವ ಆಯುಶ್ ಹೊಸಕೋಟಿ
ಚೀನಾದಲ್ಲಿ ನಡೆಯಲಿರುವ ಗ್ಲೋಬಲ್ ಕಿಡ್ಸ್ ಪೆಜೆಂಟ್ ವರ್ಡ ಇವೆಂಟ್ ನಲ್ಲಿ ಭಾರತದಿಂದ ಪ್ರತಿನಿಧಿಸುತ್ತಿರುವ ಕುಂದಾನಗರಿಯ ಆಯುಶ್ ಹೊಸಕೋಟಿ ಸ್ಥಾನ ಪಡೆದಿದ್ದಾರೆ. ಚೀನಾದಲ್ಲಿ ನಡೆಯುವ ಪ್ರತಿಷ್ಠಿತ ಗ್ಲೋಬಲ್ ಕಿಡ್ಸ್ ಪೆಜೆಂಟ್ ವರ್ಡ ಇವೆಂಟ್ ನಲ್ಲಿ ಭಾರತದ ಪರವಾಗಿ ಕುಂದಾನಗರಿಯ ಪುಟಾಣಿ ಆಯುಶ್ ಹೊಸಕೋಟಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.