
VIDEO – ಚಲಿಸುತ್ತಿದ್ದ ಬೈಕ್ ಮೇಲೆ ಪ್ರೇಮಿಗಳ ರೊಮ್ಯಾನ್ಸ್..! ಯುವಕ ಪೊಲೀಸ್ ವಶಕ್ಕೆ

ಚಾಮರಾಜನಗರ : ಬೈಕ್ ಟ್ಯಾಂಕ್ ಮೇಲೆ ಕುಳಿತು ಯುವಕನನ್ನು ಅಪ್ಪಿಕೊಂಡು ಹೋಗುತ್ತಿರುವ ಯುವತಿ, ಜನರನ್ನೂ ಲೆಕ್ಕಿಸದೆ ಮೇಲೆ ರೊಮ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಚಾಮರಾಜನಗರ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ನಡುರಸ್ತೆಯಲ್ಲಿ ಇವರಿಬ್ಬರ ರೊಮಾನ್ಸ್ನ ವಿಡಿಯೊ ಭಾರಿ ವೈರಲ್ ಆಗಿತ್ತು. ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ರೈಡ್ ಮಾಡಿ ಯುವಕ ತನ್ನ ಪ್ರೀತಿ ಪ್ರದರ್ಶನ ಮಾಡಿದ್ದ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿರುವ ಘಟನೆ ಎನ್ನಲಾದ ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜನರು, ವಾಹನಗಳ ಸಂಚಾರವಿದ್ದರೂ ಯಾವುದಕ್ಕೂ ಕೇರ್ ಮಾಡದ ಈ ಜೋಡಿಗಳು ತಮ್ಮದೇ ಲೋಕದಲ್ಲಿ ಮುಳುಗಿದ್ದವು.

ಆದರೆ ಸಧ್ಯ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬೈಕ್ ಹಾಗೂ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಹೆಲ್ಮೆಟ್ ರಹಿತ, ಅಪಾಯಕಾರಿ ಚಾಲನೆ ಹಾಗೂ ಅಜಾಗರೂಕತೆ ಚಾಲನೆ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ, ಯುವತಿಯ ಹುಚ್ಚಾಟಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಅಥಣಿ : ಬಸ್ಸಿಗಾಗಿ ಕಾಯ್ದು ಕುಳಿತ ಯುವಕನನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಕಾಮುಕ – Belagavivoice – https://belagavivoice.com/yuvakana_mele_atyachara/#.YmPd5_F6Ndc.whatsapp