
ಮೌನ ಮುರಿದ ಸಾಹುಕಾರ್ ; ಕಚೇರಿ ಗುಟ್ಟು, ರಟ್ಟು

ಬೆಳಗಾವಿ : ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣ ವಿಚಾರವಾಗಿ ಸಧ್ಯ ಡಿಸಿಎಂ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು ಅಖಾಡಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು ಕಾಂಗ್ರೆಸ್ ಭವನ ನಿರ್ಮಾಣದ ವಿಚಾರವಾಗಿ ಮಾಹಿತಿ ಹಂಚಿಕೊಂಡರು. ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡಿಸಿದ್ದು ನಾನು, ನನ್ನ ಸ್ವಂತ 1 ಕೋಟಿ 27 ಲಕ್ಷ ರೂ. ಹಣ ಕೊಟ್ಟಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲು ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು, ನಾನು, ಮಹಾದೇವಪ್ಪ ಹಾಗೂ ಅಂದಿನ ರಾಜ್ಯಾಧ್ಯಕ್ಷ ಪರಮೇಶ್ವರ್ ಕಚೇರಿ ಕಟ್ಟಡಕ್ಕೆ ಶ್ರಮಿಸಿದ್ದು, ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ದೇಣಿಗೆ ನೀಡಿದ್ದಾರೆ ಎಂದರು.
ಸಧ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ವಿಚಾರವಾಗಿ ಮಾತನಾಡಿ. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಡಿಕೆಶಿ ಅವರನ್ನು ಬೆಳಗಾವಿಗೆ ಬರಲು ಬಿಟ್ಟಿಲ್ಲ. ಪಕ್ಷದ ಮುಖಂಡನಾಗಿ ಅವರ ಸೂಚನೆ ಪಾಲಿಸಿದ್ದು ಬಿಟ್ಟರೆ ಜಿಲ್ಲಾ ರಾಜಕಾರಣ ವಿಚಾರವಾಗಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.
ಸತೀಶ್ ಜಾರಕಿಹೊಳಿ ಅವರಿಗೆ ವಿರೋಧಿಸುವ ಗುಣ ಬಂದಿದ್ದು ಸಂತೋಷದ ವಿಸಯ. ಅನ್ಯಾಯದ ವಿರುದ್ಧ ದ್ವನಿ ಎತ್ತಬೇಕು. ಮುಂದೆಯೂ ಅವರ ಅಧಿಕಾರ ಉಳಿಯಬೇಕಾದರೆ ಗಟ್ಟಿಯಾಗಿ ಧ್ವನಿ ಎತ್ತುವ ಸಲಹೆ ನೀಡುವೆ ಎಂದರು.