
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಗ್ಯ ಸ್ಥಿತಿ ; ವೈದ್ಯರು ಹೇಳಿದ್ದೇನು…?

ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಚಿವರ ಆರೋಗ್ಯದ ಕುರಿತು ವೈದ್ಯ ರವಿ ಪಾಟೀಲ್ ಮಹತ್ವದ ಅಪ್ಡೇಟ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರವಿ ಅವರು. ಕಳೆದ 24 ಗಂಟೆಗಳಲ್ಲಿ ಸಚಿವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಬೆನ್ನು ಹುರಿಗೆ ಪೆಟ್ಟಾಗಿರಯವ ಹಿನ್ನಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಚಿವರು ಚಿಕಿತ್ಸೆಗೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ.
ಸಧ್ಯ ಸಚಿವರಿಗೆ ಯಾವುದೇ ತೊಂದರೆ ಇಲ್ಲ. ಕಾರು ಚಾಲಕ ಹಾಗೂ ಸಚಿವರ ಅಂಗರಕ್ಷಕನಿಗೆ ಚಿಕಿತ್ಸೆ ನೀಡಲಾಗಿದೆ. ಹತ್ತು ದಿನಗಳವರೆಗೆ ಹೆಬ್ಬಾಳಕರ್ ವಿಶ್ರಾಂತಿ ಪಡೆಯಬೇಕು. ಚನ್ನರಾಜ ಹಟ್ಟಿಹೊಳಿ ಅವರೂ ವಿಶ್ರಾಂತಿಯಲ್ಲಿರಬೇಕು. ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ವಿಜಯ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಮುಂದುವರಿಯಲಿದ್ದು ನಾಲ್ಕು ದಿನಗಳವರೆಗೆ ಚಿಕಿತ್ಸೆ ಮುಂದುವರಿಯಲಿದೆ. ಅದಾದ ನಂತರ ಮನೆಗೆ ಕಳುಹಿಸಲಾಗುತ್ತದೆ. ಎಂಆರ್ ಐ ಸ್ಕ್ಯಾನ್ ಸೇರಿದಂತೆ ವಿವಿಧ ರೀತಿಯಲ್ಲಿ ತಪಾಸಣೆ ಕೈಗೊಂಡಿರುವುದಾಗಿ ಡಾ. ರವಿ ಪಾಟೀಲ ತಿಳಿಸಿದರು.