
ಬೆಳಗಾವಿ : ಭೀಕರ ರಸ್ತೆ ಅಪಘಾತ ; ಬಾಲಕ ಸಾವು

ಬೈಲಹೊಂಗಲ: ಎದುರಿಗೆ ಬರುತ್ತಿರುವ ವಾಹನ ಅಪಘಾತ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕುಡಿಯುವ ನೀರಿನ ಪೈಪಲೈನ ಕಾಮಗಾರಿಗೆ ಆಳುವಡಿಸುವ ಪೈಪಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವನು ಮೃತಪಟ್ಟ ಘಟನೆ ತಾಲೂಕಿನ ಸಂಗೊಳ್ಳಿ ಗ್ರಾಮದ ಹತ್ತಿರ ಮಂಗಳವಾರ ಜರುಗಿದೆ.
ಮೃತ ಬಾಲಕನನ್ನು ಗೋಕಾಕ ತಾಲೂಕಿನ ಹನುಮಾಪುರ ಗ್ರಾಮದ ರಮೇಶ ತೋಳಿನವರ(7) ಎಂದು ಗುರುತಿಸಲಾಗಿದೆ. ಕುಟುಂಬಸ್ಥರು ಸಂಗೊಳ್ಳಿ ರಾಕ್ ಗಾರ್ಡನ ವೀಕ್ಷಣೆ ಮಾಡಿ ಮರಳಿ ತಮ್ಮ ಊರಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬಾಲಕ ಹೆದರಿ ಪ್ರಜ್ಞೆ ತಪ್ಪಿದ್ದರಿಂದ ಕುಟುಂಬಸ್ಥರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಕುಟುಂಬಸ್ಥರ ಆರೋಪ: ಅಪಘಾತ ನಡೆದು ಬಾಲಕನನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲು ಹೋದಾಗ ಆಸ್ಪತ್ರೆ ಸಿಬ್ಬಂದಿಗಳು ಬೇಜವಾಬ್ದಾರಿ ವರ್ತಿಸಿ ಕಾಲಹರಣ ಮಾಡಿದ ಹಿನ್ನೆಲೆಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರು ಪ್ರತಿಭಟಿಸಿದ್ದಾರೆ ಎಂದು ತಿಳಿದ ಬಂದಿದೆ ಎನ್ನಲಾಗಿದೆ.