
VIDEO – ರೀಲ್ಸ್ ಹುಚ್ಚಿಗೆ ಪ್ರಾಣ ಕಳೆದುಕೊಂಡ ಚಾರ್ಟರ್ಡ್ ಅಕೌಂಟೆಂಟ್

ಮುಂಬೈ : ರೀಲ್ಸ್ ನಲ್ಲಿನ ಅಭಿನಯದ ಮೂಲಕ ಖ್ಯಾತಿ ಹೊಂದಿದ್ದ ಮುಂಬೈ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಅನ್ವಿ ಕಾಮ್ದಾರ್ ವೀಡಿಯೋ ಮಾಡುವ ಸಂದರ್ಭದಲ್ಲಿ ರಾಯಗಢದ ಜಲಪಾತದ ಕಂದಕಕ್ಕೆ ಬಿದ್ದು ಸಾವಣಪ್ಪಿದ್ದಾರೆ.
ಬುಧವಾರ ಅನ್ವಿ ತಮ್ಮ ಸ್ನೇಹಿತರ ಜೊತೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಂಗಾಂವ್ ನ ಪ್ರಸಿದ್ಧ ಕುಂಭೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ರೀಲ್ಸ್ ಮಾಡುತ್ತಿದ್ದ ಅನ್ವಿ ಆಯತಪ್ಪಿ ಜಲಪಾತದಿಂದ ಕೆಳಕ್ಕೆ ಬಿದ್ದಿದ್ದಾರೆ.
ಮಳೆ ಹಿನ್ನಲೆಯಲ್ಲಿ ಜಲಪಾತ ವೀಕ್ಷಣೆಗೆ ಬಂದಿದ್ದ ಅನ್ವಿ ಅಲ್ಲಿನ ಸುತ್ತಲಿನ ಪರಿಸರದ ವೀಡಿಯೋ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದ್ದು ಘಟನೆ ನಡೆದ ಕೆಲ ಹೊತ್ತಿನಲ್ಲಿ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.
ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅನ್ವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿದ್ದಾರೆ. ರೀಲ್ಸ್ ಹುಚ್ಚಿಗೆ ಯುವತಿ ಪ್ರಾಣ ಕಳೆದುಕೊಂಡಿದ್ದು ವಿಪರ್ಯಾಸ.
Anvi kamdar Reals Mumbai