ರಾಜ್ಯದಲ್ಲಿ ಗ್ಯಾರಂಟಿ ಹೊಡೆತಕ್ಕೆ ಅನ್ನಭಾಗ್ಯ ಯೋಜನೆಗೆ ಬ್ರೇಕ್..! ಕೇಂದ್ರದ ಪಡಿತರ ಮಾತ್ರ ವಿತರಣೆ

ಬೆಂಗಳೂರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ (Annabhagya Scheme) ಯೋಜನೆಗೆ ಮೇ ತಿಂಗಳಲ್ಲಿ ದಿಢೀರ್ (Big News) ಹಿಂದಡೆಯಾಗಿದೆ.
ಈ ತಿಂಗಳು ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ನೀಡಬೇಕಾಗಿದ್ದ ಕನ್ನ ಪಾಲಿನ ಉಚಿತ ಅಕ್ಕಿಯನ್ನು ಎಪರಿಸಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದ್ದು, ಇದು ರಾಜ್ಯದ ಲಕ್ಷಾಂತರ ಬಡ ಕುಟುಂಬರ ಚಿಂತೆಗೆ ಕಾರಣವಾಗಿದೆ.
ಪ್ರಸಕ್ತ ಪಡಿತರ ಕೇಂದ್ರಗಳಲ್ಲಿ ಕೇವಲ ಕೇಂದ್ರ ಸರ್ಕಾರದ ಪಾಲಿನ ಅನ್ನ ಧಾನ್ಯವನ್ನು ಮಾತ್ರ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರದ ಅಕ್ಕಿ ಮಾತ್ರ ಗ್ರಾಹಕರಿಗೆ ಲಭ್ಯ :/ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ತಲಾ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರ ಬದ್ಧವಾಗಿತ್ತು. ಆದರೆ, ಪ್ರಸಕ್ತ ಮೇ ತಿಂಗಳಲ್ಲಿ ಈ ಹೆಚ್ಚುವರಿ ಅಕ್ಕಿ ವಿತರಣೆ ಆಗದೆ ಇರುವುದರಿಂದ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ. ರಾಜ್ಯಕ್ಕೆ ರಾಜ್ಯದ ನಾಯಬಲೆ ಅಂಗಡಿಗಳಲ್ಲಿ ಕೇವಲ ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆಯ (NFSA) ಕೋಟಾವನ್ನು ಮಾತ್ರ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.
ರಾಮನಗರ ಜಿಲ್ಲೆಯ ನಾಯಬೆಲೆ ಅಂಗಡಿಗಳಲ್ಲಿ ಉಗ್ರಾಣಲೇ ಹೆಚ್ಚುವರಿ ಹಣಕ್ಕೆ ಪ್ರತಿ ಆರೋಪವಾಗಿದ್ದು, ಅಲಿ ಮೇ ಹಾಗೂ ಜೂನ್ ತಿಂಗಳ ಪದಿತರವನ್ನು ಒಟ್ಟಿಗೆ ವಿತರಿಸಲಾಗುತ್ತಿದೆ. ಆದರೆ, ಈ ಹಂಚಿಕೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಅಕ್ಕಿ ಸಂಪೂರ್ಣವಾಗಿ ಕೈಬಿಟ್ಟು ಹೋಗಿದೆ. ಸದ್ಯ ಮೇ ತಿಂಗಳ ಕೋಟಾದಡಿ ಪ್ರತಿ ಕಾರ್ಡ್‌ದಾರರಿಗೆ 3 ಕೆಜಿ ರಾಗಿ ಹಾಗೂ 2 ಕೆಜಿ ಅಕ್ಕಿಯನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದ್ದು ಸರ್ಕಾರದ ಗ್ಯಾರಂಟಿ ಯೋಜನೆಯಡಿ ಸಿಗಬೇಕಿದ್ದ ಹೆಚ್ಚುವರಿ ಆಹಾರ ಧಾನ್ಯ ಲಭ್ಯವಿಲ್ಲ.
ಸಪ್ಟನೆ ನೀಡುವಂತೆ ಜನರ ಆಗ್ರಹ : ರಾಜ್ಯ ಸರ್ಕಾರದ ಈ ಪ್ರಮುಖ ಯೋಜನೆಗೆ ತಾಂತ್ರಿಕ ಕಾರಣಗಳು ಅಡ್ಡಿಯಾಗಿದೆಯೋ ಅಥವಾ ಅಕ್ಕಿಯ ದಾಸ್ತಾನು ಕೊರತೆಯೊಂದಾಗಿ ಬ್ರೇಕ್ ಬಿದ್ದಿದೆಯೋ ಎಂಬ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಅಧಿಕೃತ ಸ್ಪಷ್ಟನೆ ಸಿಗಲಿಲ್ಲ.
ಆದರೆ ಕುಟುಂಬಗಳು ದೈನಂದಿನ ಜೀವನಕ್ಕೆ ಆಸರೆಯಾಗಿದ್ದ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ಈ ತಿಂಗಳು ಸಿಗದೇ ಇರುವುದರಿಂದ, ಸಾಮಾನ್ಯ ಜನರು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಕೊಟ್ಟು ಅಕ್ಕಿ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

