ಚನ್ನಮ್ಮ ಪಡೆ ಬಿಟ್ಟು ರಾಯಣ್ಣ ಪಡೆ ಬಂದು ಗಲಾಟೆ ಮಾಡಿದವರಿಗೆ ವಾರ್ನಿಂಗ್ ಮಾಡಿ ಬಿಟ್ರು….!
ಬೆಳಗಾವಿ : ನಗರದ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯ ಮುಂಭಾಗದಲ್ಲಿ ಯುವಕ, ಯುವತಿಯರ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆಯಲ್ಲಿದ್ದವರನ್ನು ಬೆಳಗಾವಿ ವಾಯ್ಸ್ ಸುದ್ದಿ ಬಿತ್ತರಿಸುತ್ತಿದ್ದಂತೆ ಪೊಲೀಸರು ಆಗಮಿಸಿ ಘಟನೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಘಟನಾ ಸ್ಥಳದಲ್ಲಿ ವಾರ್ನಿಂಗ್ ಮಾಡಿ ಬಿಟ್ಟಿದ್ದಾರೆ.
ಚನ್ನಮ್ಮ ಪಡೆಯನ್ನು ಮಲ್ಲಪ್ಪ ಶೆಟ್ರು ಹಿಡಿದುಕೊಂಡು ಹೋದರಾ ? ಎನ್ನುವ ತಲೆ ಬರಹದಲ್ಲಿ ಬೆಳಗಾವಿ ವಾಯ್ಸ್ ಸುದ್ದಿ ಪ್ರಕಟಿಸಿದ ಗಂಟೆಯೊಳಗೆ ಪೊಲೀಸರು ಆಗಮಿಸಿ ಗಲಾಟೆಯಲ್ಲಿ ಭಾಗಿಯಾಗಿದ್ದವರಿಗೆ ವಾರ್ನಿಂಗ್ ಮಾಡಿ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ ಚನ್ನಮ್ಮ ಪಡೆಯನ್ನು ಆಕ್ಟಿವ್ ಆಗಿ ಕೆಲಸ ಮಾಡಬೇಕಿದ್ದ ಚನ್ನಮ್ಮ ಪಡೆಯನ್ನು ನಿಷ್ಕ್ರಿಯಗೊಳಿಸಿ ಯುವಕ, ಯುವತಿಯರ ಗಲಾಟೆಯಲ್ಲಿ ವಾರ್ನಿಂಗ್ ಮಾಡಿ ಬಿಟ್ಟಿರುವುದು ದುರಂತವೆ ಸರಿ.