ಸೆ.25 ರಂದು ಬೆಂಗಳೂರಿನಲ್ಲಿ ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ : ನಿಜಗುಣಾನಂದ ಶ್ರೀ
ಬೆಳಗಾವಿ : ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದ ಮಹಾತ್ಮರ ಚರಿತ್ರೆಯನ್ನು ಅತಿ ಅದ್ಬುತವಾದ ಪುಸ್ತಕ ಸೆ.25ಕ್ಕೆ ಬೆಂಗಳೂರಿನ ಶ್ರೀ ಬಸವೇಶ್ವರ ಸುಜ್ಞಾನ ಮಠಪದಲ್ಲಿ ನೆರವೆರಲಿದೆ. ಕಾರ್ಯಕ್ರಮದಲ್ಲಿ ಎಲ್ಲ ಮಠಾಧೀಶರ ಪೂಜ್ಯರ ಆಹ್ವಾನ ಮಾಡಲಾಗಿದೆ ಎಂದರು.
ನಮ್ಮ ನಾಡಿನ ಪ್ರಜ್ಞಾವಂತರು ಎಲ್ಲರೂ ಸಾಕ್ಷಿಯಾಗಬೇಕು. ಈ ಪುಸ್ತಕದಲ್ಲಿನ ವಿಷಯವನ್ನು ಪ್ರತಿಯೊಬ್ಬರು ಕೊಂಡುಕೊಂಡು ಮನೆಯ ಮಕ್ಕಳಿಗೆ ಇತಿಹಾಸದ ಪರಿಚಯ ಮಾಡಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೊರೊನಾದ ವೇಳೆ ಎಲ್ಲರೂ ಬಾಗಿಲು ಹಾಕಿಕೊಂಡು ಕುಳಿತ್ತಿದ್ದರು.ಅಥಣಿಯ ಮೊಟಗಿಮಠದ ಶ್ರೀಗಳು ಮಠದ ಬಾಗಿಲನ್ನು ಹಾಕಿಕೊಂಡು ಮಹಾತ್ಮರ ಚರಿತಾಮೃತ ಪುಸಕ್ತದ ಬಾಗಿಲನ್ನು ತೆರೆದಿರುವುದು ಸಂತಸದ ಸಂಗತಿ ಎಂದರು.
216ಜನ ಮಹಾತ್ಮರ ಚರಿತ್ರೆಯನ್ನು ಈ ಪುಸ್ತಕದಲ್ಲಿದೆ. ಈ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆಗೊಳಿಸಲಿದ್ದಾರೆ. ಎಲ್ಲ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು.
ಶಂಕರ ಗುಡಸ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ನಾಗನೂರುಮಠದ ಅಲ್ಲಮಪ್ರಭು ಸ್ವಾಮೀಜಿ, ಅಥಣಿಯ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.