ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಿಸಿದ ಅಭಯ್ ಗೆ ಸಿಎಂ ಬುಲಾವ್
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಗೆ ಸಿಎಂ ಬುಲಾವ್ ನೀಡಿದ್ದು ಮಹತ್ವದ ಜವಾಬ್ದಾರಿ ವಹಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.
ಯಾರು ನಿರೀಕ್ಷಿಸದಂತೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಂತೋಷವಾಗಿರುವ ಸಿಎಂ ಅಭಯ್ ಪಾಟೀಲ್ ಗೆ ಬೆಂಗಳೂರಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಮುಖ್ಯವಾದ ವಿಷಯ ಏನೆಂದರೆ ಪಾಲಿಕೆ ಅಧಿಕಾರ ಜವಾಬ್ದಾರಿಯನ್ನು ಅಭಯ್ ಹೆಗಲಿಗೆ ವಹಿಸಿ, ಸಚಿವ ಸಂಪುಟದಲ್ಲಿ ಉಳಿದ ನಾಲ್ಕು ಸ್ಥಾನಗಳ ಭರ್ತಿ ಸಂದರ್ಭದಲ್ಲಿ ಅಭಯ್ ಪಾಟೀಲ್ ಅವರನ್ನು ಗಮನಿಸುವ ಲೆಕ್ಕಾಚಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೀವ್ರ ಮುತುವರ್ಜಿ ವಹಿಸಿ ಶಾಸಕ ಅಭಯ್ ಪಾಟೀಲ್ ಕೆಲಸ ಮಾಡಿದ್ದರು. ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದ ವರೆಗೂ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಹಿನ್ನಲೆಯಲ್ಲಿ ಬಿಜೆಪಿ ಬೃಹತ್ ಗೆಲುವು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಖುದ್ದು ಸಿಎಂ ಬುಲಾವ್ ನೀಡಿದ್ದಾರೆ.