
ಆ್ಯಂಕರ್ ಅನುಶ್ರೀ ಡ್ರಗ್ ಕೇಸ್ : ಪ್ರಶ್ನೆಗೆ ಜಾರಿಕೊಂಡ ಗೃಹ ಸಚಿವರು

ಬೆಳಗಾವಿ : ಡ್ರಗ್ ಕೇಸ್ ನಲ್ಲಿ ಆ್ಯಂಕರ್ ಅನುಶ್ರೀ ಹೆಸರು ಕೈಬಿಟ್ಟ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು. ಈ ವಿಚಾರವಾಗಿ ನಾನು ಕೇಳಿ ಹೇಳುವೆ ಎಂದಷ್ಟೇ ಹೇಳಿ ಜಾರಿಕೊಂಡಿದ್ದಾರೆ.
ಡ್ರಗ್ ಕೇಸ್ ವಿಚಾರವಾಗಿ ರಾಜಕೀಯ ಇತ್ತಡದಿಂದ ಅನುಶ್ರೀ ಹೆಸರನ್ನು ಕೈಬಿಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ. ಡ್ರಗ್ ಕೇಸ್ ನಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರು ಕೈಬಿಡುವುದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿದೆ ಎಂದರು.
ಆದರೆ ಅನುಶ್ರೀ ಹೆಸರು ಕೈಬಿಟ್ಟ ಪ್ರಶ್ನೆಗೆ ಸ್ಪಷ್ಟತೆ ನೀಡದ ಗೃಹ ಸಚಿವರು ಹಾರಿಕೆ ಉತ್ತರ ನೀಡಿ ಜಾರಿಕೊಂಡರು. ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಅನುಶ್ರೀ ಸ್ನೇಹಿತ ಕಿಶೋರ್ ಶೆಟ್ಟಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ. ಆಂಕರ್ ಅನುಶ್ರೀ ಕಾರ್ಯಕ್ರಮ ನಡೆಸುವ ಸಂದರ್ಭದಲ್ಲಿ ಸುಸ್ತಾಗದಂತೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.