
ಪವಿತ್ರ ಗೌಡ ತುಟಿಗೆ ಲಿಪ್ ಸ್ಟಿಕ್ ಹಾಕಲು ಅವಕಾಶ ಕೊಟ್ಟ ಪೊಲೀಸ್ ಗೆ ನೋಟೀಸ್

ಬೆಂಗಳೂರು : ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ A1 ಆರೋಪಿ ಪವಿತ್ರ ಗೌಡ ಅವರ ತುಟಿಗೆ ಲಿಪ್ ಸ್ಟಿಕ್ ಹಾಕಲು ಅವಕಾಶ ಕೊಟ್ಟ ಕಾರಣಕ್ಕೆ ಸಧ್ಯ ಪೊಲೀಸ್ ಅಧಿಕಾರಿಗೆ ಸಂಕಷ್ಟ ಎದುರಾಗಿದೆ.
ರೇಣುಕಾಸ್ವಾಮಿ ಹತ್ಯೆಯಾದ ಆರ್.ಆರ್ ನಗರದ ಪಟ್ಟಣಗೆರೆ ಶೆಡ್ ಗೆ ಕೊಲೆ ಆರೋಪಿಗಳಾದ ನಟ ದರ್ಶನ್, ಪವಿತ್ರ ಗೌಡ ಹಾಗೂ ಇನ್ನೀತರ ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವಿಜಯನಗರ ಪೊಲೀಸ್ ಠಾಣೆ ಮಹಿಳಾ ಪಿಎಸ್ಐ ಅವರು ನಟಿ ಪವಿತ್ರ ಗೌಡಗೆ ಲಿಪ್ ಸ್ಟಿಕ್ ಹಾಕಲುಮಾಡಿಕೊಟ್ಟಿದ್ದರು ಎಂದು ತಿಳಿದುಬಂದಿದೆ.
ಪವಿತ್ರ ಗೌಡಗೆ ಲಿಪ್ ಸ್ಟಿಕ್ ಹಾಕು ಅವಕಾಶ ಕಲ್ಪಿಸಿದ್ದ ಮಹಿಳಾ ಪಿಎಸ್ಐ ವಿರುದ್ಧ ಕರ್ತವ್ಯಲೋಪ ಆರೋಪದ ಮೇಲೆ ಅವರಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಕೊಲೆ ಪ್ರಕರಣ ಬಳಕೆಗೆ ಬಂದಾಗಿನಿಂದಲೂ ನಟಿ ಪವಿತ್ರ ಗೌಡ ಮೇಕಪ್ ಮಾಡಿಕೊಂಡೆ ಇದ್ದರು. ಈ ಮಧ್ಯೆ ಪೊಲೀಸ್ ಠಾಣೆಯಲ್ಲಿ ಪವಿತ್ರ ಗೌಡಗೆ ಮೇಕಪ್ ಕಿಟ್ ಕೊಟ್ಟವರು ಯಾರು ಎಂಬ ಪ್ರಶ್ನೇಯೂ ಮೂಡಿತ್ತು.