ಲೋಕಸಭೆ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ
ನವದೆಹಲಿ : 18 ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದು, ಸತತ ಎರಡನೇ ಅವಧಿಗೆ ಈ ಹುದ್ದೆ ಅಲಂಕರಿಸಿದ್ದಾರೆ.
ಇಂದು ನಡೆದ ಲೋಕಸಭಾ ಸ್ಪೀಕರ್ ಚುನಾವಣೆಯಲ್ಲಿ ಓಂ ಬಿರ್ಲಾ ಅವರು ಆಯ್ಕೆ ಮಾಡಲಾಯಿತು. ನೂತನ ಸ್ಪೀಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದರು.
ಎರಡನೇ ಅವಧಿಗೆ ಸ್ಪೀಕರ್ ಹುದ್ದೆ ಅಲಂಕರಿಸುವ ಮೂಲಕ ಓಂ ಬಿರ್ಲಾ ಹೊಸ ಇತಿಹಾಸ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಎನ್.ಡಿ.ಎ ಮೈತ್ರಿಕೂಟದ ಸ್ಪೀಕರ್ ಯಾರಾಗಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಮೂಡಿತ್ತು. ಆದರೆ ಕಳೆದ ಅವಧಿಯಲ್ಲಿ ಸ್ಪೀಕರ್ ಇದ್ದವರನ್ನೇ ಮುಂದುವರಿಸಿದ್ದಾರೆ.