ನಕಲಿ ಡಾಕ್ಟರ್ ಹೆಡೆಮುರಿ ಕಟ್ಟಿದ ಜಿಲ್ಲಾಡಳಿತ ; ಡಂಡ ಹಾಗೂ ಜೈಲು ಶಿಕ್ಷೆ
ಬೆಳಗಾವಿ : ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮುಂದಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಕೇರೂರ್ ಗ್ರಾಮದ ಮುಲ್ಲಾ ಕ್ಲಿನಿಕ್ ನ ನಕಲಿ ವೈದ್ಯ ರಿಯಾಜ್ ಮುಲ್ಲಾಗೆ ಶಿಕ್ಷೆ ವಿಧಿಸಲಾಗಿದೆ.
ಅಕ್ರಮವಾಗಿ ಆಸ್ಪತ್ರೆ ನಡೆಸುತ್ತಿದ್ದ ರಿಯಾಜ್ ಮುಲ್ಲಾ ಎಂಬ ವೈದ್ಯನ ಆಸ್ಪತ್ರೆ ಸೀಜ್ ಮಾಡಿದ್ದು, ನಕಲಿ ವೈದ್ಯನಿಗೆ ಒಂದು ವಾರ ಜೈಲು ಶಿಕ್ಷೆ ಹಾಗೂ ಲಕ್ಷ ರೂಪಾಯಿ ದಂಡ ವಿಧಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಅನೇಕ ಭಾಗಗಳಲ್ಲಿ ದಾಳಿ ಮುಂದುವರಿದಿದೆ.
ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಬಡ್ಕಲಗಲ್ಲಿಯ ಎರಡೂ ಕ್ಲಿನಿಕ್ ಮೇಲೆ ಮಂಗಳವಾರ ದಾಳಿ ನಡೆಸಿದ ಘಟನೆ ನಡೆದಿದೆ. ಕಿತ್ತೂರಿನ ನಕಲಿ ವೈದ್ಯ ಲಾಡಖಾನ್ ಪ್ರಕರಣ ಬೆನ್ನಲ್ಲೆ ಎಚ್ಚೆತ್ತುಕ್ಕೊಂಡಿರುವ ಆರೋಗ್ಯ ಇಲಾಖೆ ಎಲ್ಲೆಲ್ಲಿ ಸಾರ್ವಜನಿಕರು ದೂರು ನೀಡುತ್ತಿದ್ದಾರೋ ಆಯಾ ಕ್ಲಿನಿಕ್ ಮೇಲೆ ದಾಳಿ ನಡೆಸಿ ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಜಿಲ್ಲೆಯ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣು ಇಟ್ಟಿರುವ ಆರೋಗ್ಯ ಇಲಾಖೆ ನಗರದ ಶಿವ ಕ್ಲಿನಿಕ್ ಮತ್ತು ಗುರು ಕೃಪಾ ಆಸ್ಪತ್ರೆ ಮೇಲೆ ದಾಳಿ ನಡೆಸಿ ಆಸ್ಪತ್ರೆಯ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಶಿವ ಕ್ಲಿನಿಕ್ ಗೆ ನೋಟಿಸ್ ನೀಡಿದೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಬೆಳಗಾವಿ ಡಿಎಚ್ ಓ ಮಹೇಶ ಕೋಣಿ, ಟಿಎಚ್ ಓ ಸಂಜಯ್ ಡುಮ್ಮಗೋಳ, ಬೆಳಗಾವಿ ತಹಶಿಲ್ದಾರರ ನೇತೃತ್ವದಲ್ಲಿ ನಡೆದ ದಾಳಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಚ್ಓ ಮಹೇಶ ಕೋಣಿ, ಬಡಕಲಗಲ್ಲಿ ಶಿವಾ ಕ್ಲಿನಿಕ್ ಎಂದು ನಾಮಫಲಕ ಹಾಕಿ ಒಳಗಡೆ ಔಷಧಿಗಳನ್ನು ಬೇರೆ ಕೊಡುತ್ತಿದ್ದಾರೆ.
ಇವರು ಪಡೆದಿರುವ ದಾಖಲಾತಿ ನಕಲಿ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.ಶಿವಾ ಕ್ಲಿನಿಕ್ ಎಂದು ನಾಮಫಲಕ ಹಾಕಿ ಬೇಕಾಬಿಟ್ಟಿ ಔಷಧಿಗಳನ್ನು ನೀಡುತ್ತಿದ್ದಾರೆ. ವೈದ್ಯರು ಎಲ್ಲಿದ್ದಾರೆ ಎಂದು ಕೇಳಿದರೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಇಲ್ಲಿನ ಸಿಬ್ಬಂದಿಗಳು.
ಶಿವಾ ಕ್ಲಿನಿಕ್ ಬಗ್ಗೆ ಜನರು ಜಾಗೃತಿ ಇರಬೇಕು. ಕಳೆದ ಮೂರು ವರ್ಷಗಳ ಹಿಂದೆ ಈ ಕ್ಲಿನಿಕ್ ಮೇಲೆ ದೂರುಗಳು ಬಂದಿದ್ದವು. ಆಗ ಇದನ್ನು ಸೀಜ್ ಮಾಡಲಾಗಿತ್ತು. ಈಗ ಮತ್ತೇ ಜಿಲ್ಲಾಧಿಕಾರಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ಮತ್ತೇ ನಾವು ಸೀಜ್ ಮಾಡಿದ್ದೇವೆ ಎಂದರು.