ಉತ್ತರಕ್ಕೆ ಬೆನಕೆ – ದಕ್ಷಿಣಕ್ಕೆ ಅಭಯ್ : ಗ್ರಾಮೀಣಕ್ಕೆ ಯಾರು?
ಬೆಳಗಾವಿ : 2023 ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು ಬಿಜೆಪಿ ಟಿಕೆಟ್ ಪಟ್ಟಿ ಸಿದ್ದಪಡಿಸುತ್ತಿದೆ. ಈ ಮಧ್ಯೆ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲಿರುವ ಬಿಜೆಪಿ ಹೈಕಮಾಂಡ್ ಬೆಳಗಾವಿಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಮುಂದಾಗಿದೆ ಎಂದು ತಳಿದುಬಂದಿದೆ.
ಬೆಳಗಾವಿ ಉತ್ತರದಲ್ಲಿ ಶಾಸಕ ಅನಿಲ ಬೆನಕೆ ಅವರನ್ನು ಕಣಕ್ಕೆ ಇಳಿಸಲಿದೆ. ಜೊತೆಗೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಅಭಯ್ ಪಾಟೀಲ್ ಅವರಿಗೆ ಮಣೆ ಹಾಕಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂಬುದು ಸದ್ಯದ ಲೆಕ್ಕಾಚಾರ.
ಇನ್ನೂ ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಗ್ರಾಮೀಣದಲ್ಲಿ ಯಾರು ಬಿಜೆಪಿ ಅಭ್ಯರ್ಥಿ ಎಂಬುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಮಧ್ಯೆ ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳಕರ ಮಧ್ಯೆ ಪೈಪೋಟಿ ಮುಂದುವರಿದಿದ್ದು ರಮೇಶ್ ಜಾರಕಿಹೊಳಿ ಪರ ಅಭ್ಯರ್ಥಿ ಕಣಕ್ಕೆ ಇಳಿಯುವುದು ಬಹುತೇಕ ಫಿಕ್ಸ ಎನ್ನಲಾಗುತ್ತಿದೆ.
ಈಗಾಗಲೇ ರಾಜ್ಯ ಬಿಜೆಪಿ ನಡೆಸಿರುವ ಕೋರ್ ಕಮೀಟಿ ಸಭೆಯಲ್ಲಿ ಬೆಳಗಾವಿ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕರಿಗೆ ಮಣೆ ಹಾಕುವ ನಿರ್ಧಾರಕ್ಕೆ ಬಂದಿದ್ದು, ಇಲ್ಲಿ ಯಾವುದೇ ಗೊಂದಲ ಸೃಷ್ಟಿ ಆಗದಂತೆ ಮುತುವರ್ಜಿ ವಹಿದಿದೆ ಎಂದು ಹೇಳಲಾಗುತ್ತಿದೆ.