ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದ ನಕಲಿ ಅಭ್ಯರ್ಥಿಗಳ ಪಟ್ಟಿ : ಬೆಳಗಾವಿಯಲ್ಲಿ ಯಾರಿಗೆಲ್ಲ ಟಿಕೆಟ್ ಕೊಟ್ಟರು ಗೊತ್ತಾ?
ಬೆಳಗಾವಿ : ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ ಬಿಡುಗಡೆ ಮಾಡಿ ನಾಯಕರಿಗೆ ತಲೆನೋವು ತರಿಸಿದ್ದ ಬೆನ್ನಲ್ಲೇ ಸಧ್ಯ ಕಾಂಗ್ರೆಸ್ ಪಕ್ಷದ ಎರಡನೇ ನಕಲಿ ಪಟ್ಟಿ ಬಿಡುವ ಮೂಲ ಕಿಡಿಗೇಡಿಗಳು ನಾಯಕರಿಗೆ ಮುಜುಗರ ತಂದಿದ್ದಾರೆ.
ಈಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಟ್ಟಿದ್ದು ಎರಡನೇ ಪಟ್ಟಿಗಾಗಿ ಆಕಾಂಕ್ಷಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಒಂದು ನಕಲಿ ಅಭ್ಯರ್ಥಿ ಪಟ್ಟಿ ಎಲ್ಲೆಡೆ ವೈರಲ್ ಆಗುತ್ತಿದ್ದು ಇದು ನಮ್ಮ ಪಟ್ಟಿಯಲ್ಲಿ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಬೆಳಗಾವಿಯ ಪ್ರಮುಖ ಕ್ಷೇತ್ರದ ಅಚ್ಚರಿ ಅಭ್ಯರ್ಥಿ ಗಳನ್ನು ಘೋಷಣೆ ಮಾಡುವ ಮೂಲಕ ಕಿಡಿಗೇಡಿಗಳು ನಾಯಕರಿಗೆ ಮುಜುಗರ ಉಂಟು ಮಾಡಿದ್ದು ಸುಳ್ಳಲ್ಲ.
ನಕಲಿ ಪಟ್ಟಿಯಲ್ಲಿ ಬೆಳಗಾವಿ ಗ್ರಮೀಣಕ್ಕೆ – ವಿನಯ್ ನಾವಲಗಟ್ಟಿ, ರಾಯಬಾಗ – ಶಂಬು ಕಲ್ಲೋಳಕರ್, ಅಥಣಿ – ಸದಾಶಿವ ಬುಟಾಳಿ, ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್, ಕಿತ್ತೂರು – ಬಾಬಾಸಾಹೇಬ್ ಪಾಟೀಲ್, ಸವದತ್ತಿ ವಿಶ್ವಾಸ್ ವೈದ್ಯ ಅವರಿಗೆ ಟಿಕೆಟ್ ಹಂಚಿಕೆ ಮಾಡಿದ್ದಾರೆ.