VIDEO – ಸಾವರ್ಕರ್ ಭಾವಚಿತ್ರ ಹರಿದರೆ ಮುಸ್ಲಿ ಹಾಗೂ ಕಾಂಗ್ರೆಸ್ಸಿಗರ ಕೈ ಕತ್ತರಿಸುತ್ತೇವೆ : ಮುತಾಲಿಕ್
ಬೆಳಗಾವಿ : ವೀರ ಸಾವರ್ಕರ್ ಕಾಂಗ್ರೆಸ್, ಮುಸ್ಲಿಂರ ವಿರೋಧಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅಪ್ರತಿಮ ಕ್ರಾಂತಿಕಾರಿ. ಮುಸ್ಲಿಂರು ಗಣೇಶ ಮಂಡಳದಲ್ಲಿ ಸಾವರ್ಕರ್ ಅವರ ಬ್ಯಾನರ್ ಮುಟ್ಟಿದರೆ ಮುಸ್ಲಿಂಮರ ಹಾಗೂ ಕಾಂಗ್ರೆಸ್ ನವರ ಕೈ ಕತ್ತರಿಸಿ ಬಿಸಾಕಲಾಗುವುದು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ ಮುತಾಲಿಕ ಎಚ್ಚರಿಕೆ ನೀಡಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ದೇಶ ಭಕ್ತ ಸ್ವಾತಂತ್ರಕ್ಕಾಗಿ 23 ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿಯನ್ನು ಇಡೀ ಜೀವನವನ್ನು ಕಳೆದಿದ್ದಾರೆ. ಅವರಿಗೆ ಅಪಮಾನ ಮಾಡುವುದನ್ನು ದೇಶದ ಭಾರತೀಯರಾದ ನಾವು ಸಹನೆ ಮಾಡುವುದಿಲ್ಲ. ಯಾರೂ ಯಾವುದೇ ಸಂದರ್ಭದಲ್ಲಿ ಸಾವರ್ಕರ್ ಫೋಟೋ ಅವಮಾನ ಮಾಡಲು ಬಿಡುವುದಿಲ್ಲ ಎಂದು ಗುಡಗಿದರು.
ಕಾಂಗ್ರೆಸ್ ನವರಿಗೆ ರಾಜೀವ ಗಾಂಧಿ, ಇಂದಿರಾ ಗಾಂಧಿ, ಮಹಾತ್ಮ ಗಾಂಧಿ, ರಾಹುಲ್ ಗಾಂಧಿ ಬಿಟ್ಟರೆ ಉಳಿದವರು ಹೋರಾಟಗಾರು ಅಲ್ಲ ಎಂದು ತಿಳಿದುಕೊಂಡಿದ್ದಾರೆ. ಲಕ್ಷಾಂತರ ಜನರ ಪ್ರಾಣಾರ್ಪಣೆಯಿಂದ ಸ್ವಾತಂತ್ರö್ಯ ಸಿಕ್ಕು 75 ವರ್ಷವಾಗಿದೆ. ಇಂದಿರಾ ಗಾಂಧಿ ಅವರು ಪ್ರಧಾನಿ ಇದ್ದಾಗ ಸಾವರ್ಕರ್ ಅವರು ಅಪ್ರತಿಮ ದೇಶಭಕ್ತ ಎಂದು ಪತ್ರ ಬರೆದಿದ್ದಾರೆ. ಅಂಚೆ ಚೀಟಿಯನ್ನು ಪೋಸ್ಟೆಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯನವರು, ಕಾಂಗ್ರೆಸ್ ಕಾರ್ಯಕರ್ತರಿಗೆ ಬುದ್ಧಿ ಇಲ್ಲವಾ ಎಂದು ಪ್ರಶ್ನಿಸಿ ಅವರು, ಸಾವರ್ಕರ್ ಸಮಾನಾಗಿ ಯಾವ ಗಾಂಧಿನೂ, ನೆಹರೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮತ್ತು ಮುಸ್ಲಿಂರು ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದರು. ಅವಹೇಳನ ಮಾಡಿದರು. ಈ ಹಿನ್ನೆಲೆಯಲ್ಲಿ ಅಪ್ರತಿಮ ಕ್ರಾಂತಿಕಾರಿ ದೇಶ ಭಕ್ತ. 23 ವರ್ಷಗಳ ಕಾಲ ಜೈಲಿನಲ್ಲಿದ್ದ ಮಹಾನ್ ಪುರಷನಿಗೆ ಅವಮಾನ ಮಾಡುವುದನ್ನು ನಾವು ಸಹನೆ ಮಾಡದೆ, ಅದರ ವಿರುದ್ಧ ಅವರಿಗೆ ಉತ್ತರ ನೀಡಲು ಸಾವರ್ಕರ್ ಅವರ ಭಾವ ಚಿತ್ರವನ್ನು ಕರ್ನಾಟಕದ ಎಲ್ಲ ಸಾರ್ವಜನಿಕ ಗಣೇಶ ಮಂಡಳದಲ್ಲಿ ಅದನ್ನು ಪ್ರದರ್ಶನ ಮಾಡುವ ನಿಟ್ಟಿನಲ್ಲಿ 10 ಸಾವಿರ ಮಂಡಳಿಗೆ ಕೊಡುವ ನಿರ್ಧಾರ ಮಾಡಿದ್ದೇವೆ ಎಂದರು.
ಸಾವರ್ಕರ್ ಅವರಿಗೆ ಅವಮಾನ ಮಾಡಿರುವ ಕಾಂಗ್ರೆಸ್ ಹಾಗೂ ಮುಸ್ಲಿಂರಿಗೆ ತಿರುಗೇಟು ನೀಡುವ ಉದ್ದೇಶದಿಂದ ಮನೆ ಮನೆಗೆ ಸಾವರ್ಕರ್ ಅವರ ವಿಚಾರಧಾರೆ ಚರ್ಚೆಯಾಗಬೇಕು. ಹಳ್ಳಿ ಹಳ್ಳಿಯ ಗಣೇಶ ಮಂಡಳಿಗಳಿಗೂ ಭಾವಚಿತ್ರ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು 1947ರ ಹಿಂದಿನ ಕಾಂಗ್ರೆಸ್. ಈಗೀನ ಕಾಂಗ್ರೆಸ್ ಅತ್ಯಂತ ಭ್ರಷ್ಟ ಕಾಂಗ್ರೆಸ್. ಭಯೋತ್ಪಾದಕರನ್ನು ನಿರ್ಮಾಣ ಮಾಡಿದ, ದೇಶವನ್ನು ಹಾಳು ಮಾಡಿದ ಕಾಂಗ್ರೆಸ್. 1947ರ ಹಿಂದಿನ ಕಾಂಗ್ರೆಸ್ ಅದು ದೇಶದ ಆಂದೋಲನಾತ್ಮಕ ಒಂದು ಸಂಸ್ಥೆ ಇತ್ತು ವಿನಃ ಪಕ್ಷ ಇರಲಿಲ್ಲ. ಆಮೇಲೆ ಪಕ್ಷವಾಗಿದೆ ಎಂದು ಹರಿಹಾಯ್ದರು.