
ಚಿರತೆ ಕಾರ್ಯಾಚರಣೆಗೆ ಆಗಮಿಸಿದ ಮಲೆನಾಡಿನ ಎರಡು ಆನೆ

ಬೆಳಗಾವಿ ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಚಿರತೆಯ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ನಿಂದ ಬೆಳಗಾವಿಗೆ ಎರಡು ಲಾರಿಗಳಲ್ಲಿ ಆಲೇ, ಅರ್ಜುನ ಎಂಬ ಆನೆಗಳು ತಡರಾತ್ರಿ ಆಗಮಿಸಿದವು.
ಆನೆಗಳ ಜತೆಗೆ ಓರ್ವ ಅರಿವಳಿಕೆ ತಜ್ಞ ಕೂಡ ಆಗಮಿಸಿದ್ದಾರೆ. ಮಂಗಳವಾರ ರಾತ್ರಿ ವಿಶ್ರಾಂತಿ ಪಡೆದು
ಒಲಿಂದು ಆನೆಗಳಿಂದ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿವೆ.
ಕಳೆದ 19 ದಿನಗಳ ಹಿಂದೆ ಇಲ್ಲಿನ ಜಾಧವ ನಗರದಲ್ಲಿ ಪ್ರತ್ಯೇಕವಾಗಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಮರೆಯಾಗಿದ್ದ ಚಿರತೆ ಸೋಮವಾರ ಪ್ರತ್ಯೇಕವಾಗಿ ಕ್ಷಣಾರ್ಧದಲ್ಲಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಮರೆಯಾಗಿದ್ದ ಚಿರತೆ ಶೋಧ ಕಾರ್ಯಾಚರಣೆ ರಾತ್ರಿಯಲ್ಲ ನಡೆಸಿದರೂ ಪತ್ತೆಯಾಗಿಲ್ಲ.

ಮಂಗಳವಾರ ಅರಣ್ಯ ಇಲಾಖೆಗೆ ಸಹಾಯ ಮಾಡುತ್ತಿರುವ ನಗರ ಪೊಲೀಸರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಮಾಜ ಸೇವಕರು ಗಾಲ್ಫ್ ಮೈದಾನದ ಬಳಿ ಚಿರತೆ ಕಾರ್ಯಾಚರಣೆಗೆ ಬಂದಾಗಲೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆರಳೆಣಿಕೆಯಷ್ಟು ಇದ್ದಿದ್ದು ಕಂಡು ಬಂದಿತ್ತು.
ಚಿರತೆ ಕಾರ್ಯಾಚರಣೆ ನಡೆಸಲು ಅತ್ಯಾಧುನಿಕ ಎರಡೂ ಡ್ರೋಣ್ ಕ್ಯಾಮರಾಗಳನ್ನು ಬೆಂಗಳೂರಿನಿAದ ತರಲಾಗಿದ್ದು, ರಕ್ಷಣಾ ಇಲಾಖೆಯ ಅನುಮತಿ ಪಡೆದ ಬಳಿಕ ಗಾಲ್ಫ್ ಪ್ರದೇಶದಲ್ಲಿ ಹಾರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಈ ಡ್ರೋಣ್ ಕ್ಯಾಮರಾಗಳು ಚಿರತೆ ಇರುವ ಎರಡ್ಮೂರು ಕಿಲೋಮೀಟರ್ ದೂರ ಇದ್ದರೂ ಅದನ್ನು ಪತ್ತೆ ಹಚ್ಚುವ ಸಾಮಥ್ರ‍್ಯ ಈ ಡ್ರೋಣ್ ಕ್ಯಾಮರಾಗೆ ಇರುವುದು ವಿಶೇಷವಾಗಿದೆ. ಗಾಲ್ಫ್ ಮೈದಾನದ ಪ್ರದೇಶ ರಕ್ಷಣಾ ಇಲಾಖೆಗೆ ಒಳಪಡುವ ಹಿನ್ನೆಲೆಯಲ್ಲಿ ಚಿರತೆ ಕಾರ್ಯಾಚರಣೆಯಲ್ಲಿ ಡ್ರೋಣ್ ಬಳಕೆ ಮಾಡುವಾಗ ರಕ್ಷಣಾ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ ಅತ್ಯಾಧುನಿಕ ತಂತ್ರಜ್ಞಾನ ಇರುವ ಡ್ರೋಣ್ ಹಾರಿಸಲು ರಕ್ಷಣಾ ಇಲಾಖೆ ಅನುಮತಿಯನ್ನು ಜಿಲ್ಲಾಡಳಿತ ಕೇಳಿದೆ.
ಅಲ್ಲದೆ ಶಿವಮೊಗ್ಗ ಜಿಲ್ಲೆಯ ಸಕ್ರೈಬೈಲಿನಿಂದ ಆನೆಗಳು ಮಂಗಳವಾರ ರಾತ್ರಿ ಬೆಳಗಾವಿಯ ಗಾಲ್ಫ್ ಮೈದಾನಕ್ಕೆ ಬರುವ ಸಾಧ್ಯತೆ ಇದ್ದು, ಅರಣ್ಯ ಸಿಬ್ಬಂದಿಗಳು ಹೋಗದ ಗಿಡಗಂಟಿಗಳಲ್ಲಿ ಅಡುಗಿ ಕುಳಿತ ಚಿರತೆಯನ್ನು ಆನೆಯ ಮೇಲೆ ಕುಳಿತು ಪತ್ತೆ ಹಚ್ಚುವ ಲೆಕ್ಕಾಚಾರ ಅರಣ್ಯ ಇಲಾಖೆಯದ್ದಾಗಿದೆ.

ಇಲ್ಲಿನ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದಲ್ಲಿ ಮರೆಯಾಗಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಹರಸಾಹಸ ಪಡುತ್ತಿದೆ. ಈಗಾಗಲೇ 20 ಟ್ರಾಪ್ ಕ್ಯಾಮರಾ, 300ಕ್ಕೂ ಅಧಿಕ ಸಿಬ್ಬಂದಿಗಳನ್ನು ಚಿರತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಆದರೂ ಮತ್ತೇ ಗಾಲ್ಫ್ನಲ್ಲಿರುವ ಚಿರತೆಯ ಚಲನವಲನ ಇನ್ನೂ ಪತ್ತೆಯಾಗಿಲ್ಲ.

ಫಲಿಸದ ಭೇಟೆ ನಾಯಿ ತಂತ್ರ: ಗಾಲ್ಫ್ ಮೈದಾನದಲ್ಲಿ ಮರೆಯಾಗಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಾನಾ ರೀತಿಯ ಕಸರತ್ತು ನಡೆಸಿದೆ. ಬೋನಿನಲ್ಲಿ ನಾಯಿ ಇಟ್ಟು, ಬೋನಿನೊಳಗೆ ಅರಣ್ಯ ಸಿಬ್ಬಂದಿಗಳನ್ನು ಇಟ್ಟರೂ ಸೆರೆ ಸಿಗದ ಚಿರತೆ. ಸೋಮವಾರ ಪ್ರತ್ಯೇಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಎಲ್ಲಾ ಆಯಾಮಗಳಲ್ಲಿ ಚಿರತೆ ಸೆರೆ ಹಿಡಿಯಲು ರೂಪಿಸಿದ ಯೋಜನೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಹುಕ್ಕೇರಿಯಲ್ಲಿ ಭೇಟೆ ನಾಯಿಗಳನ್ನು ತಂದು ಚಿರತೆ ಹಿಡಿಯುವ ದುಸ್ಸಾಹಸ ಮಾಡಿತ್ತು. ನಾಯಿ ಭೇಟೆಯಾಡುವ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವೆ ಎನ್ನುವ ಸಾಮಾನ್ಯ ಜ್ಞಾನ ಅರಣ್ಯ ಇಲಾಖೆಗೆ ಇಲ್ಲ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿ ಅಸಮಾಧಾನ ಹೊರ ಹಾಕಿದರು.

ಸೋಮವಾರ ಪ್ರತ್ಯೇಕ್ಷಗೊಂಡು ತಂತಿ ಬೇಲಿ ಕಿತ್ತು ಗಾಲ್ಫ್ ಮೈದಾನ ಪ್ರವೇಶ ಮಾಡಿರುಗ ಚಿರತೆ. ಮತ್ತೆ ಅದೇ ಮಾರ್ಗದಿಂದ ಹೊರ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಚಿರತೆ ಸೆರೆ ಹಿಡಿಯಲು ಸರ್ಪಗಾವಲು ಹಾಕಿದ್ದಾರೆ. ಈ ಮಾರ್ಗದಲ್ಲಿನ ರಸ್ತೆ ಮೇಲೆ ಬರುವ ವಾಹನಗಳನ್ನು ಬೇರೆ ಮಾರ್ಗಗಳಲ್ಲಿ ಸಂಚಾರಿ ಪೊಲೀಸರು ಕಳುಹಿಸುತ್ತಿದ್ದರು.
ಕೆಲವರಿಂದ ಕಾರ್ಯಾಚರಣೆಗೆ ಕಿರಿಕಿರಿ
ನಾವು ಸಮಾಜಸೇವಕರು ಎಂದು ಮೊಬೈಲ್ ಹಿಡಿದುಕೊಂಡು ಗಾಲ್ಫ್ ಮೈದಾನದಲ್ಲಿ ಚಿರತೆ ಕಾರ್ಯಾಚರಣೆಯಲ್ಲಿ ಕೆಲವರು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಗಾಲ್ಫ್ ಮೈದಾನ ರಕ್ಷಣಾ ಇಲಾಖೆಗೆ ಒಳಪಡುವುದರಿಂದ ಇಲ್ಲಿ ಕೆಲವು ನಿಯಮಗಳಿವೆ ಎನ್ನುವುದನ್ನು ಅರಿಯದೆ ಬೇಕಾಬಿಟ್ಟಿ ವರ್ತನೆ ಮಾಡಿ ಮಿಲಿಟರಿ ಅಧಿಕಾರಿಗಳಿಂದ ಛೀಮಾರಿ ಹಾಕಲಾಯಿತು. ಚಿರತೆಯ ಕಾರ್ಯಾಚರಣೆಯ ಹೆಸರಿನಲ್ಲಿ ಫೋಟೊ ತೆಗೆಸಿಕೊಳ್ಳಲು ಬರುವವರನ್ನು ಪೊಲೀಸ್ ಇಲಾಖೆ ದೂರು ಇಟ್ಟು ಅರಣ್ಯ ಇಲಾಖೆಗೆ ಸಹಕರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.