
ಅಂಬಾನಿ ಮಗನ ಮದುವೆ ಸಮಾರಂಭ ; ಅತಿಥಿಗಳಿಗೆ ಕೊಟ್ಟ ಉಡುಗೊರೆ ಮೌಲ್ಯ ಎಷ್ಟು ಗೊತ್ತಾ…?

ಮುಂಬೈ : ದೇಶದ ಅತ್ಯಂತ ದುಬಾರಿ ಮದುವೇ ಎಂದೇ ಹೆಗ್ಗಳಿಕೆ ಪಡೆದ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಸಮಾರಂಭ ಕಳೆದ ಆರು ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಜರುಗಿದ್ದು ಸಧ್ಯ ಮುಕ್ತಾಯದ ಹಂತ ತಲುಪಿದೆ.
ಅಂಬಾನಿ ಮಗನ ಮದುವೆಗೆ ವಿಶ್ವದ ಹಲವು ಗಣ್ಯರು ಸೇರಿದಂತೆ ಭಾರತದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಡಿದು ಕ್ರೀಡಾಪಟುಗಳು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.
ಮುಂಬೈನ ಪ್ರತಿಷ್ಠಿತ ಜಿಯೋ ವರ್ಲ್ಡ್ ನಲ್ಲಿ ನಡೆಯುತ್ತಿರುವ ಅದ್ಧೂರಿ ಮದುವೆ ಸಮಾರಂಭಕ್ಕೆ ಬಂದಿರುವ ಗಣ್ಯರಿಗೆ ಕೋಟಿ ಬೆಲೆ ಬಾಳುವ ಗಿಫ್ಟ್ ನೀಡಲಾಗುತ್ತಿದೆ. ಅನಂತ ಮದುವೆ ಸಮಾರಂಭಕ್ಕೆ ಬಂದ ಗಣ್ಯರಿಗೆ ಕೊಟ್ಟ ಉಡುಗೊರೆ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಅಂಬಾನಿ ಮಗನ ಮದುವೆಗೆ ಬಂದ ಗಣ್ಯರಿಗೆ ಸುಮಾರು 2 ಕೋಟಿ ರೂ. ಮೌಲ್ಯದ ಉಡುಗೊರೆ ನೀಡಲಾಗುತ್ತಿದೆ. ಹಲವಾರು ವಿಶೇಷತೆಗಳನ್ನು ಹೊಂದಿರುವ ಈ ಕೈ ಗಡಿಯಾರ ಅತಿಥಿಗಳಿಗೆ ನೀಡಲಾಗುತ್ತಿದೆ. ದೇಶದ ಶ್ರೀಮಂತ ವ್ಯಕ್ತಿಯ ಮಗನ ಮದುವೆ ಸಮಾರಂಭ ಸಧ್ಯ ವಿಶ್ವದ ಗಮನ ಸೆಳೆದಿದ್ದು ವಿಶೇಷ.