Select Page

ದೇವಸ್ತಾನ ಪ್ರವೇಶಿಸಿದ್ದ 4 ವರ್ಷದ ದಲಿತ ಬಾಲಕನಿಗೆ ದಂಡ

ದೇವಸ್ತಾನ ಪ್ರವೇಶಿಸಿದ್ದ 4 ವರ್ಷದ ದಲಿತ ಬಾಲಕನಿಗೆ ದಂಡ

ಕೊಪ್ಪಳ : ಒಂದು ಕಡೆ ಜಾತಿ ವ್ಯವಸ್ಥೆ ತೊಲಗಬೇಕೆಂದು ಪ್ರಗತಿಪರರು ಪರಿತಪಿಸುತ್ತಿದ್ದರೆ, ಮತ್ತೊಂದು ಕಡೆ ಇದೇ ಜಾತಿ ವ್ಯವಸ್ಥೆಯಲ್ಲಿ ಬಿದ್ದು ಹೊರಳಾಡುವವರು ಇದ್ದಾರೆ ಎಂಬುದೇ ನಾಚಿಕೆಗೆಡಿನ ವಿಷಯ.

ಹೌದು 4 ವರ್ಷದ ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದೇವಸ್ಥಾನ ಶುದ್ದೀಕರಣ ಮಾಡಲು 25 ಸಾವಿರ ದಂಡವಿಧಿಸಿದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರದಲ್ಲಿ ನಡೆದಿದೆ.

ಮಿಯಾಪುರ ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶ ಮಾಡಿದ್ದ ದಾಸರ ಸಮುದಾಯಕ್ಕೆ ಸೇರಿದ್ದ 4 ವರ್ಷದ ದಲಿತ ಬಾಲಕನಿಗೆ ದಂಡ ಹಾಕಿದ್ದಾರೆ. ಇದನ್ನು ವಿರೋಧಿಸಿ ದಲಿತ ಮುಖಂಡರು ಸಭೆ ನಡೆಸಿದ್ದಾರೆ.

ಸಭೆ ನಡೆಸುತ್ತಿರುವ ಗ್ರಾಮಸ್ಥರು

ದೇವಸ್ಥಾನ ಪ್ರವೇಶ ಮಾಡಿದ ದಲಿತರು :ಘಟನೆ ನಡೆದ ನಂತರ ದಲಿತ ಸಮುದಾಯದವರು ಹಾಗೂ ತಹಶಿಲ್ದಾರ್ ನೇತೃತ್ವದಲ್ಲಿ ಸಭೆ ನಡಿಸಿದ ನಂತರ ದಲಿತರು ದೇವಸ್ಥಾನ ಪ್ರವೇಶ ಮಾಡಿದ್ದಾರೆ. ಒಟ್ಟಿನಲ್ಲಿ 21 ನೇ ಶತಮಾನಕ್ಕೆ ಕಾಲಿಟ್ಟರು ಕೆಟ್ಟ ವ್ಯವಸ್ಥೆಯಿಂದ ಜನ ಹೊರಬರದಿರುವುದು ವಿಪರ್ಯಾಸವೇ ಸರಿ.

Advertisement

Leave a reply

Your email address will not be published. Required fields are marked *