ಬೆಳಗಾವಿ : ಕುಕ್ ಮಗನ ಅನನ್ಯ ಸಾಧನೆ, ಸಿಇಟಿಯಲ್ಲಿ ಮಿಂಚಿದ ಮಹಮ್ಮದ್
ಬೆಳಗಾವಿ : ನಗರದ ಆರ್ ಎಲ್ ಎಸ್ ಕಾಲೇಜು ವಿದ್ಯಾರ್ಥಿ ಮಹಮ್ಮದ್ ಕೈಫ್ ಮುಲ್ಲಾ ಸಿಇಟಿ ಯಲ್ಲಿ ಉತ್ತಮ ಸಾಧನೆ ಮಾಡಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹೊಸ ವೀರಭದ್ರ ನಗರದ ನಿವಾಸಿ ಮಹಮ್ಮದ್ ಕೈಫ್ ತಂದೆ ಕುತುಬುದ್ದೀನ್ ಮುಲ್ಲಾ ಬೆಳಗಾವಿ ಎರ್ ಫೋರ್ಸ್ ತರಬೇತಿ ಕೇಂದ್ರದಲ್ಲಿ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಾಯಿ ಗೃಹಿಣಿಯಾಗಿದ್ದು ಬಡತನದಲ್ಲೇ ಮಗ ಅದ್ಬುತ ಸಾಧನೆಗೈದಿದ್ದಾನೆ.
ಯೋಗ, ನ್ಯಾಚುರೋಪಥಿ, ಪಶು ವೈದ್ಯಕೀಯ ವಿಭಾಗದಲ್ಲಿ ಐದನೇ ರ‌್ಯಾಂಕ್. ಬಿ ಫಾರ್ಮಾ, ಫಾರ್ಮಾ ಡಿ ವಿಭಾಗದಲ್ಲಿ 8ನೇ ರ‌್ಯಾಂಕ್.
ಕೃಷಿ ವಿಭಾಗದಲ್ಲಿ 15ನೇ ರ‌್ಯಾಂಕ್. ಇಂಜಿನಿಯರಿಂಗ್ ವಿಭಾಗದಲ್ಲಿ 119ನೇ ರ‌್ಯಾಂಕ್ ಪಡೆದಿರುವ ಮಹ್ಮದ್ ಕೈಫ್ ಮುಲ್ಲಾ. ಸಿಇಟಿ ಪರೀಕ್ಷೆಯಲ್ಲಿ ಒಟ್ಟಾರೆ 240ಕ್ಕೆ 215 ಅಂಕ ಪಡೆದಿದ್ದು. ಭೌತಶಾಸ್ತ್ರ 60 ರ ಪೈಕಿ 57, ರಸಾಯನಶಾಸ್ತ್ರ 60ರ ಪೈಕಿ 57 ಅಂಕ ಪಡೆದು ಸಾಧನೆ ಮಾಡಿದ್ದಾರೆ.