
ಸದನದಲ್ಲಿ ಕಳಚಿದ ಸಿದ್ದರಾಮಯ್ಯ ಪಂಚೆ : ಹಾಸ್ಯ ಚಟಾಕಿ ಹಾರಿಸಿದ ಸದಸ್ಯರು

ಬೆಂಗಳೂರು : ಸಾಮಾನ್ಯವಾಗಿ ಅಧಿವೇಶನ ಸಂದರ್ಭದಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ಜರಗುವುದು ಸಾಮಾನ್ಯ. ಇದೇ ರಿತಿ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಜರಿದ ಪ್ರಸಂಗವು ನಡೆದಿದೆ.
ಇಂದಿನ ವಿದಾನಮಂಡಲ ಅಧಿವೇಶನದ ಪ್ರಶ್ನೋತ್ತರ ವೇಳೆ ಮಾತನಾಡಲು ಎದ್ದುನಿಂತ ಮಾಜಿ ಸಿಎಂ ಸಿದ್ದರಾಮಯ್ಯನವರ ಒಂಚೆ ಜಾರಿದ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ಡಿ. ಕೆ ಶಿವಕುಮಾರ್ ಸಿದ್ದು ಕಿವಿಯಲ್ಲಿ ಪಂಚೆ ಕಳಿಚಿದ ವಿಷಯ ಹೇಳಿದರು. ಆಗ ಸಿದ್ದರಾಮಯ್ಯ ಕುಳಿತು ಪಂಚೆ ಸರಿಪಡಿಸಿಕೊಂಡರು. ನಂತರ ಮಾತನಾಡುತ್ತ ಪಂಚೆ ಕಳಚಿದ ವಿಷಯವನ್ನು ಸದನಸ ಸದಸ್ಯರಿಗೆ ಹೇಳಿದಾಗ ಎಲ್ಲರೂ ನಕ್ಕ ಘಟನೆ ನಡೆಯಿತು.
ವೀಡಿಯೋ ನೋಡಿ : https://youtu.be/ua_FKd0gLvM
ಕೊರೊನಾ ಬಂದಾಗಿನಿಂದ ತೂಕ ಕಡಿಮೆಯಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಕೊರೊನಾ ಎರಡನೇ ಅಲೆಗೆ ತುತ್ತಾಗಿದ್ದರು. ಈ ಕುರಿತಾಗಿ ಮಾತನಾಡಿದ ಅವರು. ಕೊರೊನಾ ಬಂದ ನಂತರ ಸುಮಾರು 4 ಕೆಜಿ ತೂಕ ಕಡಿಮೆಯಾಗಿದೆ ಈ ಹಿನ್ನಲೆಯಲ್ಲಿ ಪಂಚೆ ಜಾರುತ್ತಿದೆ ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಸಿದ್ದರಾಮಯ್ಯನವರ ಕಾಲೆದಳು ಸಿದ್ದು ಮಾತ್ರ ಪಂಚೆ ಜಾರಿದ್ದನ್ನು ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲಿ ಸದನದಲ್ಲಿ ನಗೆ ಬೀರಿದ್ದು ವಿಶೇಷ.