VIDEO : ಬಿಜೆಪಿ ಬ್ಯಾನರ್ ನಿಂದ ಜಾರಕಿಹೊಳಿ ಸಹೋದರರ ಪೋಟೋ ಮಾಯ
ಯಮಕನಮರಡಿ : ಬಿಜೆಪಿ ಪಕ್ಷದಿಂದ ಜಾರಕಿಹೋಳಿ ಸಹೋದರರು ದೂರಾದರಾ ? ಅಥವಾ ಪಕ್ಷದ ಮುಖಂಡರೆ ಜಾರಕಿಹೋಳಿ ಬ್ರದರ್ಸ್ ಕಡೆಗಣಿಸುತ್ತಿದ್ದಾರಾ ಎಂಬ ಚರ್ಚೆ ಜಿಲ್ಲೆಯ ರಾಜಕೀಯ ವಲಯದದಲ್ಲಿ ಕೇಳಿ ಬಂದಿದೆ.
ರವಿವಾರ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಬಿ.ಬಿ ಹಂಜಿ ಮೈದಾನದಲ್ಲಿ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಅವರು ಆಯೋಜಿಸಿದ್ದ ಜಿಲ್ಲೆಯ ಬಿಜೆಪಿ ನಾಯಕರಿಗೆ ಅಭಿನಂದನೆ ಸಮಾರಂಭದ ಬ್ಯಾನರ್ ದಿಂದ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೋಳಿ ಅವರ ಪೋಟೋ ಮಾಯವಾಗಿದ್ದು ,ಜಾರಕಿಹೋಳಿ ಸಹೋದರನ್ನ ಬಿಜೆಪಿ ಕಡೆಗಣನೆ ಮಾಡುತ್ತಿದ್ದೆಯಾ ಎಂಬ ಮಾತು ಕೇಳಿ ಬಂದಿದೆ .
ಮಾರುತಿ ಅಷ್ಟಗಿ ಸಮಾರಂಭದ ಕುರಿತು ಸ್ವಾಗತ ಕೋರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಇವರ ಭಾಷಣದಲ್ಲಿ ಎಲ್ಲಿಯೋ ಜಾರಕಿಹೋಳಿ ಸಹೋದರ ಹೆಸರು ಪ್ರಸ್ತಾಪಿಸಿಲ್ಲ ಹಾಗೂ ಸಮಾರಂಭದ ಎಲ್ಲಾ ಬ್ಯಾನರ್ ನಲ್ಲಿ ಜಾರಕಿಹೋಳಿ ಅವರನ್ನು ಕಡೆಗಣಿಸಿದ್ದು ಚರ್ಚೆಗೆ ಗ್ರಾಸವಾಗಿದೆ .