ಕಳಪೆ ರಸಗೋಬ್ಬರ ವಿತರಣೆಯಾಗಿಲ್ಲ ಸೊಸೈಟಿ ಸ್ಪಷ್ಟನೆ
ಅಥಣಿ : ಕಳೆದ ಮೂವತ್ತು ವರ್ಷಗಳಿಂದ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೈತರಿಗೆ ಬೇಕಾದ ರಸಗೊಬ್ಬರ, ಔಷಧ ವಿತರಣೆ ಮಾಡಿ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದೆವೆ, ದಿನಾಂಕ 18 ರಂದು ಓರ್ವ ರೈತನಿಂದ ನಮ್ಮ ಸಂಘಕ್ಕೆ ಚ್ಯುತಿ ಬರುವಂತಹ ತಪ್ಪು ಸಂದೇಶ ಕೊಟ್ಟಿರುವುದರಿಂದ ಆ ರೀತಿ ನಮ್ಮ ಸಂಸ್ಥೆಯಲ್ಲಿ ಯಾವುದೇ ಘಟನೆಗಳು ಜರುಗಿಲ್ಲ, ಈ ಕುರಿತು ಸೂಕ್ತ ತನಿಖೆಗೆ ಕೃಷಿ ಅಧಿಕಾರಿಗಳಿಗೆ ನಾವು ಈಗಾಗಲೇ ದೂರು ನೀಡಿದ್ದೆವೆ, ಯಾರೂ ರೈತರು ಸಂಘದ ಬಗ್ಗೆ ತಪ್ಪು ಸಂದೇಶವನ್ನು ನಂಬಬೇಡಿ ಎಂದು ಸಂಘದ ಮಾಜಿ ಅಧ್ಯಕ್ಷ ಚಿದಾನಂದ ಬಿರಾದಾರ ಅವರು ಹೇಳಿದರು.
ಅವರು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಘೋಷ್ಠಿ ನಡೆಸಿ ಮಾತನಾಡುತ್ತಾ ಮೊನ್ನೆ ಸುಟ್ಟಟ್ಟಿ ಗ್ರಾಮದ ರೈತ ಆರೋಪ ಮಾಡಿರುವ ಹಾಗೆ ನಮ್ಮ ಸಂಘ ಯಾವುದೇ ತರಹದ ಲಾಭಕ್ಕಾಗಿ ರೈತರಿಗೆ ಮೋಸ ಮಾಡುವುದಿಲ್ಲ, ರೈತರ ಏಳಿಗೆಯೇ ನಮ್ಮ ಮೊದಲ ಧ್ಯೆಯ, ನಮ್ಮ ಸಂಘಕ್ಕೆ ಕಪ್ಪುಚುಕ್ಕೆ ಬರದೆ ಹಾಗೆ ನಾವು ಕೆಲಸ ಮಾಡುತ್ತಿದ್ದೆವೆ, ರೈತನ ಅಭಿವೃದ್ದಿಗಾಗಿ ಡೊಂಕಕಟ್ಟಿ ಕಾರ್ಯಕ್ಕೆ ಮುಂದಾಗಿದ್ದೇವೆ. ನಮ್ಮ ಸಂಘ ಯಾವುದೇ ಕುತಂತ್ರಕ್ಕೆ ಸಿಲುಕಿ ನಮ್ಮ ಹೆಸರು ಹಾಳುಮಾಡಿಕೊಳ್ಳುವುದಿಲ್ಲ, ರೈತನ ಆರೋಪದಂತೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ ಅದರ ವರದಿ ಶೀಘ್ರ ಬರುತ್ತಿದ್ದು ಅದಕ್ಕೂ ನಮ್ಮ ಸಂಘಕ್ಕೂ ಯಾವುದೇ ತರಹದ ಸಂಭಂಧವಿಲ್ಲ ಎಂದು ಸ್ಪಷ್ಟ ಪಡಿಸಿದರು.
ಅನಂತರ ಸಂಘದ ನಿರ್ದೇಶಕ ಶೌಕತ್ಅಲಿ ಮುಲ್ಲಾ ಮಾತನಾಡಿ ರೈತನ ಆರೋಪದಂತೆ ಈಗಾಗಲೇ ಕೃಷಿ ಇಲಾಖೆಗೆ ನಾವೂ ಸಹ ದೂರುನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದ್ದು, ಇತರೆ ಬೇರೆ ವಿಷಯಕ್ಕೆ ರೈತರು ಕಿವಿಕೊಡದೆ ರೈತಪರವಾದ ನಮ್ಮ ಸಂಘವನ್ನು ಬೆಂಬಲಿಸಿ ಎಂದು ಹೇಳಿದರು.
ಇನ್ನೋರ್ವ ರೈತ ಮುತ್ತಣ್ಣ ಹಿಡಕಲ್ ಮಾತನಾಡಿಕಳೆದ 20 ವರ್ಷಗಳಿಂದ ನಾನು ಅದೇ ಸಂಘದ ಗ್ರಾಹಕನಾಗಿದ್ದು ಇಲ್ಲಿಯವರೆಗೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಈ ಸಂಘದಿಂದ ಯಾವದೇ ಕಳಪೆ ಬೀಜ ಔಷಧಿ ನೀಡಿದ ಉದಾಹರಣೆ ಇಲ್ಲ. ಏನೋ ಒಂದು ಷಡ್ಯಂತ್ರ ಇದರಲ್ಲಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಈ ವೇಳೆ ಸೋಮರಾಯ ಮಾಳಗೊಂಡ (ಅಧ್ಯಕ್ಷರು), ಲಕ್ಷ್ಮಣ ಕರೋಶಿ (ನಿರ್ದೇಶಕರು), ಎಸ್ ಎಸ್ ಇಟ್ನಾಳ, ಗಿರೀಶ ಹಳಿಂಗಳಿ, ಎನ್ ವಿ ಮಲಾಬಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.