ಬೆಳಗಾವಿಯಲ್ಲಿ ಫ್ಯಾಷನ್ ಶೋ : ರಂಗುರಂಗಿನ ಲೋಕ ಅನಾವರಣ
ಬೆಳಗಾವಿ : ನಗರದ ಪ್ರತಿಷ್ಠಿತ ಕೆಎಲ್‍ಇ ಸಂಸ್ಥೆಯ ಫ್ಯಾಶನ್ ಡಿಸೈನ್ ತಂತ್ರಜ್ಞಾನ ಸಂಸ್ಥೆ ಆಶ್ರಯದಲ್ಲಿ ವಿನ್ಯಾಸ ಶೋ – 2022 ವಿಶೇಷ ಕಾರ್ಯಕ್ರಮಕ್ಕೆ ಡಿಸಿಪಿ ಪಿ.ವಿ.ಸ್ನೇಹಾ ಚಾಲನೆ ನೀಡಿದರು.
ನಗರದ ಕೆಎಲ್ಇ ಸಂಸ್ಥೆಯ ಜೀರಿಗೆ ಸಭಾಂಗಣದಲ್ಲಿ ಫ್ಯಾಶನ್ ಡಿಸೈನ್ ತಂತ್ರಜ್ಞಾನ ಸಂಸ್ಥೆಯ ವತಿಯಿಂದ ಫ್ಯಾಷನ್ ಶೋ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಉಡುಪುಗಳನ್ನು ತೊಟ್ಟು ಮನಮೋಹಕ ಹೆಜ್ಜೆ ಹಾಕಿದ್ದು ನೋಡುಗರ ಗಮನಸೆಳೆದರು.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಕ್ಯಾಟ್ ವಾಕ್, ಮನಸ್ಸು ಹಿಡಿದಿಡುವಂತಹ ಸಂಗೀತ, ಕೆಎಲ್ಇ ಕಾಲೇಜಿನ ವಿದ್ಯಾರ್ಥಿಗಳ ವಿನ್ಯಾಸ, ಫ್ಯಾಷನ್ ಶೋ ಕಲರವ ಅದ್ಬುತ ವಾಗಿತ್ತು.
ಕಳೆದ 2006 ರಿಂದಲೂ ಕೆಎಲ್ಇ ಸಂಸ್ಥೆ ಫ್ಯಾಷನ್ ಟೆಕ್ನಾಲಜಿ ಕಾಲೇಜಿನಿಂದ ಈ ಫ್ಯಾಷನ್ ಶೋ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಒಂದೊಂದು ಥಿಮ್ ಗೆ ಅನುಸಾರವಾಗಿ ಡ್ರೇಸಗಳನ್ನು ಡಿಸೈನ್ ಮಾಡಿದ್ದಾರೆ. ಹೀಗೆ ವಿದ್ಯಾರ್ಥಿಗಳೇ ಸಂಶೋಧಿಸಿದ 27 ಥಿಮ್ ಗೆ ವಿದ್ಯಾರ್ಥಿಗಳು ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿದರು.
ಶೋವನ್ನು ಉದ್ದೇಶಿಸಿ ಮಾತನಾಡಿದ ಡಿಸೈನರ್ ಚಂದನಾ, ಕೆಎಲ್‍ಇ ಫ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ಪ್ರತೀ ಬಾರಿಯಂತೆ ಈ ಬಾರಿಯೂ ವಿನ್ಯಾಸ ಶೋವನ್ನು ಆಯೋಜನೆ ಮಾಡಲಾಗಿದೆ. ಕಳೆದ ಬಾರಿ ಕಿಡ್ಸ್ ಕಲೆಕ್ಷನ್ ಮಾಡಲಾಗಿತ್ತು. ಒಟ್ಟಾರೆ 98 ಮಾಡೆಲ್‍ಗಳು ಈ ಶೋಗಾಗಿ ಕೆಲಸ ಮಾಡಿದ್ದಾರೆ. ಇದರಲ್ಲಿ ಪ್ರಥಮ ವರ್ಷದ ಡಿಸೈನರ್‍ಗಳೂ ಕೂಡ ಭಾಗಿಯಾಗಿದ್ದಾರೆ.
ಅವರಿಗೆ ಮೊದಲ ವರ್ಷದಿಂದಲೇ ಡಿಸೈನ್ ಕಲೆಕ್ಷನ್ ಹೇಗೆ ಮಾಡಬೇಕು, ಡಿಸೈನ್ ಹೇಗೆ ಮಾಡಬೇಕೆಂಬ ಕುರಿತು ಮಾಹಿತಿ ಸಿಗುತ್ತದೆ. ಮಾಡಲಿಂಗ್ ಮಾಡುವ ಕುರಿತಂತೆಯೂ ಅವರಿಗೆ ತಿಳಿದುಕೊಳ್ಳಲು ಅವಕಾಶ ಸಿಗುತ್ತೆ. ಹಾಗಾಗಿ ಒಟ್ಟಾರೆ ಈ ಶೋನಲ್ಲಿ ಭಾಗಿಯಾಗಿ ನನಗೆ ತುಂಬಾ ಹೆಮ್ಮೆಯನಿಸುತ್ತದೆ ಎಂದರು.