Bigg Boss-9 ಕಿರೀಟ ಗೆದ್ದ ರೂಪೇಶ್ ಶೆಟ್ಟಿ
ಬಹು ನಿರೀಕ್ಷಿತ ಬಿಗ್ ಬಾಸ್ 9 ನೇ ಆವೃತ್ತಿಯ ಕೊನೆಯ ಘಟ್ಟ ತಲುಪಿದ್ದು ಈ ಬಾರಿ ಕುಂದಾಪುರ ಕುವರ ರೂಪೇಶ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.
ಶನಿವಾರ ಹಾಗೂ ಭಾನುವಾರ ನಡೆಯುವ ಫಿನಾಲೆ ಕಾರ್ಯಕ್ರಮದಲ್ಲಿ ಖ್ಯಾತ ನಟ ಸುದೀಪ್ ಅವರು ವಿಜೇತರ ಹೆಸರು ಘೋಷಣೆ ಮಾಡಲಿದ್ದಾರೆ.
ಬಿಗ್ ಬಾಸ್ ಒಟಿಟಿ ಮೂಲಕ ಮಹಾ ಮನೆ ಪ್ರವೇಶ ಮಾಡಿದ್ದ ರೂಪೇಶ್ ಶೆಟ್ಟಿ ಉತ್ತಮ ಆಟವಾಡಿದ್ದರು. ಜೊತೆಗೆ ತಮ್ಮ ಮುಗ್ಧ ಸ್ವಭಾವದ ಮೂಲಕ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡ ಬಿಗ್ ಬಾಸ್ ನ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ರೂಪೇಶ್ ಶೆಟ್ಟಿ, ಮೊದಲ ಒಟಿಟಿ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ ಟಿವಿ ಸೀಸನ್ಗೆ ಆಯ್ಕೆಯಾಗಿದ್ದರು.
ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಟ. ಜೊತೆಗೆ ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ, ಗಾಯಕ ಮತ್ತು ಮಾಡೆಲ್. ರೂಪೇಶ್ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ರೂಪೇಶ್ ಇವರು 15 ಆಗಸ್ಟ್ 1991ರಂದು ಕಾಸರಗೋಡಿನ ಉಪ್ಪಳದಲ್ಲಿ ಜನಿಸಿದರು
ರೂಪೇಶ್ ಶೆಟ್ಟಿ ಮೊದಲಿಗೆ ನಮ್ಮ ಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ ಕಾಣಿಸಿಕೊಂಡರು ಹಾಗೂ ಮಂಗಳೂರಿನಲ್ಲಿ ಆರ್ ಜೆಯಾಗಿ ಜನಪ್ರಿಯತೆ ಗಳಿಸಿದರು. ‘ದಿಬ್ಬಣ’ ಎಂಬ ತುಳು ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ರೂಪೇಶ್ ತಮಿಳಿನ ಅತ್ಯಂತ ಪ್ರಸಿದ್ಧಿ ಹೊಂದಿರುವ ಕೊಲವೆರಿ ಡಿ ಎಂಬ ಹಾಡನ್ನು ಪುನರ್ ನಿರ್ದೇಶಿಸಿ ಹಾಡಿದ್ದಾರೆ.
2016ರಲ್ಲಿ ಇವರು ಐಸ್ ಕ್ರೀಮ್ ಎಂಬ ತುಳು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 2015ರ ಡೇಂಜರ್ ಜೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿದರು. ಕನ್ನಡದಲ್ಲಿ `ನಿಶಬ್ಧ 2′,`ಡೇಂಜರ್ ಜೋನ್’,`ಪಿಶಾಚಿ 2′ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರಿಗಿಟ್ ಸಿನಿಮಾದಿಂದ ಪ್ರಸಿದ್ಧಿ ಪಡೆದಿದ್ದಾರೆ.