ಕುಂದಾನಗರಿ ಜನರ ಪ್ರೀತಿಗೆ ಸಲಾಂ ಎಂದ ಶಿವಣ್ಣ – ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ ಶಿವರಾಜಕುಮಾರ್ ದಂಪತಿ
ಬೆಳಗಾವಿ : ರಾಜ್ಯಾದ್ಯಂತ ಡಾ. ಶಿವರಾಜಕುಮಾರ ನಟಸಿರುವ ವೇದ ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಾವಿ ನಗರಕ್ಕೆ ಭೇಟಿ ನಿಡಿದ ಇವರು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಚಿತ್ರಾ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಕೆಲಹೊತ್ತು ಹರಟಿದರು. ಇನ್ನೂ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ ಭೇಟಿ ಹಿನ್ನಲೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಚನ್ನಮ್ಮ ವೃತ್ತದಲ್ಲಿ ಸೇರಿ ಸಂಭ್ರಮಿಸಿದರು.
-ಕಳ್ಳನ ಕೈಚಳಕ –
ಹ್ಯಾಟ್ರಿಕ್ ಹೀರೊ ಡಾ. ಶಿವರಾಜಕುಮಾರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಚನ್ನಮ್ಮ ವೃತ್ತದಲ್ಲಿ ಜಮೆಗೊಂಡಿದ್ದರು. ಈತ ವಾಹನದ ಕಂತು ತುಂಬಲು 20 ಸಾವಿರ ರೂ. ಇಟ್ಟುಕೊಂಡು ಹೊರಟ್ಟಿದ್ದ ವ್ಯಕ್ತಿಯ ಜೇಬಿನಿಂದ ಹಣ ಕದ್ದಿದ್ದಾರೆ.
ಶ್ರೀರಾಮ ಫೈನಾನ್ಸ್ ಗೆ 407 ವಾಹನದ ಕಂತು ತುಂಬಲು ಹೊರಟ್ಟಿದ್ದ ವ್ಯಕ್ತಿಯ ಹಣ ದೋಚಿದ ಶಿವರಾಜಕುಮಾರ ಅಭಿಮಾನಿಗಳು ಇದೇ ಅಣ್ಣಾವ್ರ ಮಕ್ಕಳ ಅಭಿಮಾನಿಗಳು ಮಾಡುವ ಕೆಲಸ ಎಂದು ಹಣ ಕಳೆದುಕೊಂಡ ವ್ಯಕ್ತಿ ಹಿಡಿಶಾಪ ಹಾಕಿದ ಘಟನೆ ನಡೆಯಿತು.