
ಮಳೆಯಲ್ಲಿ ಕದ್ದು ಮುಚ್ಚಿ ಕಿಸ್ಸಿಂಗ್ ; ರೋಮ್ಯಾನ್ಸ್ ವೀಡಿಯೋ ವೈರಲ್

ಮಳೆಯನ್ನೇ ನೆಪ ಮಾಡಿಕೊಂಡ ಜೋಡಿಒಂದು ಕದ್ದು ಮುಚ್ಚಿ ಮನೆಯ ಮಹಡಿ ಮೇಲೆ ಕಿಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಂದೆಡೆ ಜೋರು ಮಳೆ ಸುರಿಯುತ್ತಿದೆ. ಇತ್ತ ಯುವತಿ ಮನೆಯಿಂದ ಮಹಡಿ ಮೇಲೆ ಬಂದಿದ್ದಾಳೆ. ಸುತ್ತು ಮುತ್ತ ಯಾರು ಇಲ್ಲ. ಮತ್ತೊಂದೆಡೆ ಭಾರಿ ಮಳೆ. ಯುವತಿ ಕರೆಗೆ ಓಗೊಟ್ಟು ಪಕ್ಕದ ಕಟ್ಟಡದಲ್ಲಿ ಯುವಕ ಕೂಡ ಕದ್ದು ಮುಚ್ಚಿ ಕಟ್ಟಡದ ಮೇಲೆ ಬಂದಿದ್ದಾನೆ.
ಮೊದಲಿಗೆ ಯುವತಿ ಎಲ್ಲಕಡೆ ನೋಡಿ ಯಾರೂ ಇಲ್ಲದಿರುವುದನ್ನು ಖಾತರಿ ಪಡಸಿಕೊಂಡಿದ್ದಾಳೆ. ನಂತರ ಯುವಕನ ಬಳಿ ತೆರಳಿ ಮುತ್ತಿಟ್ಟಿದ್ದು ಸಧ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಪ್ರೀತಿಗೆ ಯಾವುದೇ ಗೋಡೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ಮಧ್ಯೆ ವೈರಲ್ ವೀಡಿಯೋ ಗೆ ನಾನಾ ಬಗೆಯ ಕಾಮೆಂಟ್ ಕೂಡ ಬಂದಿವೆ.