ವಿಜಯಪುರ 6 ಜನರ ಬರ್ಬರ ಹತ್ಯೆ ; 12 ಆರೋಪಿಗಳು ಪೊಲೀಸ್ ವಶಕ್ಕೆ

ಚಡಚಣ : ವಿಜಯಪುರ (Vijayapura) ಜಿಲ್ಲೆಯ ಚಡಚಣ (Chadchan) ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಆರು ಜನರ ಭೀಕರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, 12 ಜನರನ್ನು ಬಂಧಿಸಿದ್ದಾರೆ. ಭೀಮಾತೀರದಲ್ಲಿ ಜಮೀನು ವಿವಾದದ ಹಿನ್ನಲೆಯಲ್ಲಿ ಈ ದಾರುಣ ನರಮೇಧ ನಡೆದಿದೆ.
ಗೋವಿಂದಪುರ ಗ್ರಾಮದ ಹೊಂಡವಲಯದಲ್ಲಿರುವ ಸುಮಾರು 24 ಎಕರೆ ವಿವಾದಿತ ಕೃಷಿ ಭೂಮಿಯ ವಿಚಾರವಾಗಿ ನಿರಾಳೆ ಮತ್ತು ಗೊಳಗಿ/ಪಾಟೀಲ್ ಕುಟುಂಬಗಳ ನಡುವೆ ದೀರ್ಘಕಾಲದ ದ್ವೇಷವಿತ್ತು. ನಿರಾಳೆ ಕುಟುಂಬದವರು ತಮ್ಮ ಜಮೀನಿನಲ್ಲಿ ಜಿಸಿಬಿ ಮತ್ತು ಟ್ರ್ಯಾಕ್ಟರ್ ಮೂಲಕ ಕೆಲಸ ಮಾಡುತ್ತಿದ್ದಾಗ, ಮೋಟಾರ್ ಸೈಕಲ್‌ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿತ್ತು.
ನಿರಾಖಡ ಕುಟಿಂಬದ ಸದಸ್ಯರಿಗೆ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಭೀಕರ ದಾಳಿಯಲ್ಲಿ ಒಂದೇ ಕುಟುಂಬದ ಇವರು ಹಾಗೂ ಅವರೊಂದಿಗೆ ಕೆಲಸಕ್ಕೆ ಬಂದ ಕಾರ್ಮಿಕ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಧ್ಯ ಪೊಲೀಸರು 12 ಜನ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಸ್ಥಳೀಯ ಆರೋಪಿ ಈರಣ್ಣಗೌಡ ಪಾಟೀಲ್ ಅವನನ್ನು A1 ಎಂದು ಮಾಡಲಾಗಿದೆ.
ಪ್ರಕರಣದ ಕುರಿತು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ದಕ್ಷತೆಯಿಂದ ತನಿಖೆ ನಡೆಸುತ್ತಿದ್ದು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

