
ರಾಕೇಶ್ ಪೂಜಾರಿ ಸಾವಿಗೆ ಏನು ಕಾರಣ…? ಹಾಸ್ಯ ನಟನ ಕೊನೆ ಕ್ಷಣದ ವೀಡಿಯೋ..!

ಉಡುಪಿ : ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ನಾಡಿನ ಜನರ ಮನಸ್ಸು ಕದ್ದಿದ್ದ ರಾಕೇಶ್ ಪೂಜಾರಿ ( 34 ) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ಸಾವಿಗೆ ಏನು ಕಾರಣ ಎಂಬ ಮಾಹಿತಿ ಇಲ್ಲಿದೆ ನೋಡಿ.
ಮೇ. 11 ನಿನ್ನೆ ಭಾನುವಾರ ಮಿಯ್ಯಾರಿನ ತನ್ನ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾನ್ಸ್ ಮಾಡುತ್ತಿದ್ದ ಸಂದರ್ಭ ರಾಕೇಶ್ ಪೂಜಾರಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಿದರು ಪ್ರಯೋಜನ ಆಗಿಲ್ಲ.
ಗೆಳೆಯರ ಜೊತೆ ಡ್ಯಾನ್ಸ್ ಮಾಡುವ ವೇಳೆ ಹೃದಯಾಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ರಾಕೇಶ್ ಪೂಜಾರಿ ಕುಸಿದು ಬಿದ್ದಿದ್ದಾರೆ. ತಕ್ಷಣ ಇವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಅವರು ತಮ್ಮ ನಟನಾ ಕೌಶಲದ ಮೂಲಕ ಜನರನ್ನು ಸೆಳೆದಿದ್ದರು. ಮೃತರು ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.