Select Page

ಮತ್ತೊಮ್ಮೆ ಈ ತಪ್ಪು ಮಾಡಲ್ಲ ಅಂದಿದ್ದ ರಚಿತಾ ಮತ್ತೆ ಹಾಟ್ ಲುಕ್ ನಲ್ಲಿ

ಮತ್ತೊಮ್ಮೆ ಈ ತಪ್ಪು ಮಾಡಲ್ಲ ಅಂದಿದ್ದ ರಚಿತಾ ಮತ್ತೆ ಹಾಟ್ ಲುಕ್ ನಲ್ಲಿ

ಬೆಂಗಳೂರು : ಕನ್ನಡ ಚಿತ್ರರಂಗದ ಸಧ್ಯದ ಬಹು ಬೇಡಿಕೆ ನಟಿಯಾಗಿರುವ ರಚಿತಾ ರಾಮ್ ಸುದ್ದಿಯಲ್ಲಿದ್ದು ಲವ್ ಯೂ ರಚ್ಚು ( Love U Rachhu ) ಸಿನೆಮಾದಲ್ಲಿ ಹಾಟ್ ಆಗಿ ಕಂಡುಬಂದಿದ್ದು ಸಧ್ಯ ಈ ಪೋಸ್ಟರ್ ಎಲ್ಲೆಡೆ ಸೌಂಡ್ ಮಾಡಿದೆ.

ಗುರುದೇಶಪಾಂಡೆ‌ ನಿರ್ಮಾಣದ ಸಿನಿಮಾ ಇದಾಗಿದ್ದು, ಲವ್ ಯೂ ರಚ್ಚು ಚಿತ್ರದ ಮುದ್ದು ನೀನೆ‌ ಹಾಡಿನಲ್ಲಿ ರಚ್ಚು ಗ್ಲಾಮ್ ಅವತಾರಕ್ಕೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಖ್ಯಾತ ಗಾಯಕ ಸಿಡ್ ಶ್ರೀರಾಮ್ ಈ ಹಾಡನ್ನು ಹಾಡಿದ್ದಾರೆ.

ಮಂಗಳವಾರ  ಸಿನಿಮಾದ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು ಯೂಟ್ಯೂಬ್ ನಲ್ಲಿ ಈಗಾಗಲೇ ಹತ್ತು ಪಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಅದಕ್ಕೂ ಮೊದಲೇ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಕುತೂಹಲ ಹುಟ್ಟು ಹಾಕುವ ಕೆಲಸ ಮಾಡಿದೆ. ಈ ಪೋಸ್ಟರ್ ನೋಡಿ ಪಡ್ಡೆ ಹುಡುಗರು ಫುಲ್ ಖುಷ್ ಆಗಿದ್ದಾರೆ.

ಉಪೇಂದ್ರ ಜೊತೆಗೆ ‘ಐ ಲವ್ ಯೂ’ ಸಿನಿಮಾದಲ್ಲಿ ರಚಿತಾ ರಾಮ್ ಒಂದು ರೊಮ್ಯಾಂಟಿಕ್‌ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆನಂತರ ಸಾಕಷ್ಟು ವಿವಾದಗಳು ಉಂಟಾಗಿ, ‘ಇನ್ಮೇಲೆ ಆ ಥರ ಕಾಣಿಸಿಕೊಳ್ಳಲ್ಲ’ ಎಂದು ರಚಿತಾ ಹೇಳಿದ್ದರು. ಈಗ ‘ಲವ್ ಯೂ ರಚ್ಚು’ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ರಚಿತಾ ಪ್ರತಿಕ್ರಿಯೆ ನೀಡಿದ್ದು, ‘ಮದುವೆ ಆದ್ಮೇಲೇ ಎಲ್ಲರೂ ಫಸ್ಟ್‌ನೈಟ್ ಅಲ್ಲಿ ಏನ್ ಮಾಡ್ತೀರಾ? ರೊಮ್ಯಾನ್ಸ್ ಮಾಡ್ತಾರೆ ಅಲ್ವಾ? ಅದನ್ನೇ ನಾವು ಮಾಡಿರೋದು. ಎಂದು ಉತ್ತರಿಸಿದ್ದಾರೆ.

Video : ಅಪ್ಪು ಆಸ್ಪತ್ರೆಗೆ ಹೋಗುತ್ತಿರುವ ಕೊನೆಯ ಗಳಿಗೆ ಸಿಸಿಟಿವಿಯಲ್ಲಿ ಸೆರೆ https://belagavivoice.com/appu_last_video/#.YYI90aVtecA.whatsapp

Advertisement

Leave a reply

Your email address will not be published. Required fields are marked *

error: Content is protected !!